ನಮ್ಮ ಉನ್ನತಿಗೆ ವ್ಯಕ್ತಿತ್ವವೇ ಬುನಾದಿ | felicitation

ಕೊಪ್ಪಳ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಕಾನ್ಲೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಯಮನೂರಪ್ಪ ಕಾಯಣ್ಣ ಅವರನ್ನು ಸಾಗರದಲ್ಲಿ ಸನ್ಮಾನಿಸಲಾಯಿತು. ಸದಾನಂದ ಸ್ವಾಮಿ, ಭೂಮೇಶ್, ಮಾಲತೇಶಪ್ಪ ಇತರರಿದ್ದರು.
ಕೊಪ್ಪಳ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಕಾನ್ಲೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಯಮನೂರಪ್ಪ ಕಾಯಣ್ಣ ಅವರನ್ನು ಸಾಗರದಲ್ಲಿ ಸನ್ಮಾನಿಸಲಾಯಿತು. ಸದಾನಂದ ಸ್ವಾಮಿ, ಭೂಮೇಶ್, ಮಾಲತೇಶಪ್ಪ ಇತರರಿದ್ದರು.
Published on
ಸಾಗರ: ಪ್ರತಿಯೊಬ್ಬರೂ ಅನುಕರಣೀಯ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ನಮ್ಮ ವ್ಯಕ್ತಿತ್ವವೇ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ರಹದಾರಿಯಾಗುತ್ತದೆ ಎಂದು ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಹೇಳಿದರು.
ಕೊಪ್ಪಳ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಬಡ್ತಿಹೊಂದಿ ವರ್ಗಾವಣೆಯಾದ ಕಾನ್ಲೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಯಮನೂರಪ್ಪ ಕಾಯಣ್ಣ ಅವರಿಗೆ ಪಟ್ಟಣದ ಬಿಇಒ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೋಳ್ಕೊಡುಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮಗೆ ಅವಕಾಶ ಸಿಕ್ಕಾಗ ನಿಸ್ವಾರ್ಥವಾಗಿ ಸೇವೆ ಮಾಡುವತ್ತ ಗಮನ ಹರಿಸಬೇಕು. ಅನೇಕ ಅವಕಾಶಗಳು ಸಿಕ್ಕಿದರೂ ಅವುಗಳನ್ನು ತಿರಸ್ಕರಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಮನೂರಪ್ಪ ಕೆಲಸ ಮಾಡಿದ್ದಾರೆ. ಇಂತಹ ವ್ಯಕ್ತಿಗಳಿಗೆ ಉನ್ನತ ಸ್ಥಾನ ಸಿಕ್ಕಾಗ ಅವರಿಂದ ಉತ್ತಮ ಕೆಲಸ ನಿರೀಕ್ಷೆ ಮಾಡಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯಮನೂರಪ್ಪ ಕಾಯಣ್ಣ, ಬಡತನದಿಂದ ಬಂದ ನನಗೆ ಕಷ್ಟ-ಸುಖ ಎರಡೂ ಅರಿವಿದೆ. ಉತ್ತಮ ಸೇವೆ ಬದುಕಿನ ಮಾರ್ಗಸೂಚಿ ಆಗಬೇಕು ಎನ್ನುವ ಉದ್ದೇಶ ಇರಿಸಿಕೊಂಡು ನಾನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಆರ್. ನಾಯ್ಕ, ಪ್ರಮುಖರಾದ ಮಹಾಬಲೇಶ್ವರ್, ದತ್ತಾತ್ರೇಯ ಭಟ್, ಗಜೇಂದ್ರ, ಉಮೇಶ್, ಡಾ. ಅನ್ನಪೂರ್ಣಾ, ವಿ.ಟಿ.ಸ್ವಾಮಿ, ಉಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net