ಸಂಘರ್ಷರಹಿತ ಜೀವನದಿಂದ ನೆಮ್ಮದಿ | college programme

ತುಂಗಾ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಕಾಂ ಪದವಿಯಲ್ಲಿ ರ‌್ಯಾಂಕ್ ಗಳಿಸಿದ ಈಶಾನ್ಯ ಮತ್ತು ಮನಿಶಾ ಆರ್. ಶೆಟ್ಟಿ ಅವರನ್ನು ಪುರಸ್ಕರಿಸಲಾಯಿತು. ಡಾ. ಬಿ.ಎಂ.ಪುಟ್ಟಯ್ಯ, ಕೆ.ಇ.ಪ್ರದೀಪ್, ಆರ್.ಕುಮಾರಸ್ವಾಮಿ ಇತರರಿದ್ದರು.
ತುಂಗಾ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಕಾಂ ಪದವಿಯಲ್ಲಿ ರ‌್ಯಾಂಕ್ ಗಳಿಸಿದ ಈಶಾನ್ಯ ಮತ್ತು ಮನಿಶಾ ಆರ್. ಶೆಟ್ಟಿ ಅವರನ್ನು ಪುರಸ್ಕರಿಸಲಾಯಿತು. ಡಾ. ಬಿ.ಎಂ.ಪುಟ್ಟಯ್ಯ, ಕೆ.ಇ.ಪ್ರದೀಪ್, ಆರ್.ಕುಮಾರಸ್ವಾಮಿ ಇತರರಿದ್ದರು.
Published on
ತೀರ್ಥಹಳ್ಳಿ: ಸತ್ಯ ಹೇಳಿದರೂ ಪ್ರಮಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವ ಈಗಿನ ಕಾಲದಲ್ಲಿ ಯುವಪೀಳಿಗೆ ಮಾನವೀಯತೆ, ಸಂಘರ್ಷರಹಿತವಾಗಿ ಕೂಡಿ ಬಾಳುವ ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಎಂ.ಪುಟ್ಟಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ತುಂಗಾ ಪದವಿಪೂರ್ವ ವಸತಿ ಕಾಲೇಜಿನ ಪ್ರತಿಭಾ ಪುರಸ್ಕಾರ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧಣೆ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಕ್ಕೂ ಮುಂದಿದ್ದಾರೆ ಎಂದರು.
ಸಾಮಾಜಿಕ ಜಾಲತಾಣ ಆತಂಕಕಾರಿಯಾಗಿ ಪರಿಣಮಿಸಿದೆ. ಯುವ ಪೀಳಿಗೆಯನ್ನು ಸೋಮಾರಿಗಳನ್ನಾಗಿ ಮಾಡುವ ಜತೆಗೆ ಸೃಜನಶೀಲತೆಯ ಜೀವಕೋಶವನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ. ಇದರ ಪರಿಣಾಮವಾಗಿ ಯುವಕರ ಆಶೋತ್ತರಗಳು ಮಹತ್ವದ ಕನಸುಗಳು ನಾಶವಾಗುತ್ತಿವೆ. ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಜೀವನದಲ್ಲಿ ಸೋಲು-ಗೆಲುವು, ಲಾಭ-ನಷ್ಟಗಳಿಗೆ ಹೆಚ್ಚು ಮನ್ನಣೆ ನೀಡಬಾರದು. ಮೂಢನಂಬಿಕೆಗಳಿಗೆ ಬಲಿಯಾಗದೆ ಸಂಘರ್ಷವೇ ಇಲ್ಲದಂತೆ ಬದುಕು ಸಾಗಿಸಬೇಕಿದೆ. ಪರಿಸರ ನಾಶದ ಪರಿಣಾಮವಾಗಿ ವನ್ಯಜೀವಿಗಳು ಜನವಸತಿ ಪ್ರದೇಶಕ್ಕೆ ದಾಳಿ ಮತ್ತು ಜೀವಹಾನಿ ಮಾಡುತ್ತಿರುವ ಬಗ್ಗೆ ಯುವಕರು ಚಿಂತನೆ ನಡೆಸಬೇಕಿದೆೆ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಕೆ.ಇ.ಪ್ರದೀಪ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಆರ್.ಕುಮಾರಸ್ವಾಮಿ, ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್, ಕಾರ್ಯದರ್ಶಿ ಬಿ.ಗಣಪತಿ, ಐಕ್ಯೂಎಸಿ ಸಂಚಾಲಕ ಡಾ. ನಾಗರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net