ವೈಯಕ್ತಿಕ ಸ್ವಚ್ಛತೆಗೆ ಗಮನ ಕೊಡಿ | pu college programme

ಶಿಕಾರಿಪುರದಲ್ಲಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಜೆಸಿಐನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಂತಾರಾಮ ಶೇಟ್, ಡಾ. ಕೀರ್ತಿ, ಭದ್ರಾಪುರ ಹಾಲಪ್ಪ, ವಸಂತ ಗೌಡ, ಗಣೇಶ್‌ಪೈ ಇತರರಿದ್ದರು.
ಶಿಕಾರಿಪುರದಲ್ಲಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಜೆಸಿಐನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಂತಾರಾಮ ಶೇಟ್, ಡಾ. ಕೀರ್ತಿ, ಭದ್ರಾಪುರ ಹಾಲಪ್ಪ, ವಸಂತ ಗೌಡ, ಗಣೇಶ್‌ಪೈ ಇತರರಿದ್ದರು.
Published on
ಶಿಕಾರಿಪುರ: ಎಲ್ಲ ಭಾಗ್ಯಗಳಿಗಿಂತ ಆರೋಗ್ಯವೇ ದೊಡ್ಡದು. ಮುಖ್ಯವಾಗಿ ಕುಟುಂಬವನ್ನೇ ಕಣ್ಣಾಗಿ ಕಾಯುವ ಹೆಣ್ಣುಮಕ್ಕಳು ಆರೋಗ್ಯದ ಕಡೆ ಗಮನಹರಿಸಬೇಕು ಎಂದು  ಜೆಸಿಐ ಅಧ್ಯಕ್ಷ ಶಾಂತಾರಾಮ್ ಶೇಟ್ ಹೇಳಿದರು.
ಜೆಸಿಐ ಶಿಕಾರಿಪುರ ಚಂದನ ಸಂಸ್ಥೆಯು ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಅನನ್ಯ’ ಸಮಾಜಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣುಮಕ್ಕಳು ಇಂದು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿನಿಯರ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ಕಾಲೇಜಿಗೆ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಿಷನ್ ಅಳವಡಿಸಿ, ಉಚಿತವಾಗಿ ಪ್ಯಾಡ್‌ಗಳನ್ನು ವಿತರಿಸಲಾಗುತ್ತಿದೆ. ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೆಸಿಐ ಇಂಡಿಯಾದ ಫ್ಲಾೃಗ್‌ಶಿಪ್ ಪ್ರೋಗ್ರಾಂನಡಿ ವಿದ್ಯಾರ್ಥಿನಿಯರಿಗೆ ಸ್ಟೀಲ್ ಬಾಟಲಿಗಳನ್ನು ವಿತರಿಸಲಾಗುತ್ತಿದೆ ಎಂದರು.
ಪ್ರಾಚಾರ್ಯ ವೆಂಕಟೇಶ್ ಮಾತನಾಡಿ, ಜೆಸಿಐ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಇಡೀ ಸಮಾಜಕ್ಕೆ ಪ್ರೇರಣಾದಾಯಿ ಸಂದೇಶ ನೀಡುತ್ತಿದೆ ಎಂದು ಶ್ಲಾಘಿಸಿದರು.
ಋತುಚಕ್ರದ ಕುರಿತು ಮಾತನಾಡಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯೆ ಕೀರ್ತಿ,  ಋತುಚಕ್ರದ ವೈಜ್ಞಾನಿಕ ಹಿನ್ನೆಲೆ, ಆ ಸಮಯದಲ್ಲಿ ಕಾಡುವ ಆರೋಗ್ಯ ಸಮಸ್ಯೆ, ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಿದರು.
 ಜೆಸಿಐ ವಲಯ ಉಪಾಧ್ಯಕ್ಷ ಕಾರ್ಕಳ ಗಣೇಶ್ ಪೈ, ಭದ್ರಾಪುರದ ಹಾಲಪ್ಪ, ವಸಂತ ಗೌಡ, ಪತ್ರಕರ್ತ ಕೆ.ಎಸ್.ಹುಚ್ರಾಯಪ್ಪ, ಭಾವನಾ ರಾಮಪ್ಪ, ಭಾಗ್ಯಾ ವೀರೇಶ್, ಪ್ರಶಾಂತ್, ಶರತ್, ಸಂತೋಷ್, ಪ್ರವೀಣ್, ವೆಂಕಟೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net