ಸಾಗರ: ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಪರಮೇಶ್ವರಪ್ಪ ಅಧಿಕಾರ ವಹಿಸಿಕೊಂಡರು.
ಇವರು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾಗಿದ್ದು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಐದು ವರ್ಷ ಸೇವೆ ಸಲ್ಲಿಸಿದ್ದಾರೆ. ಹಾಲಿ ಸರ್ಕಾರಿ ನೌಕರರ ಸಂಘದ ಸದಸ್ಯರಾಗಿದ್ದು, ಉಪನ್ಯಾಸಕ ಸಂಘ ಸೇರಿ ತಾಲೂಕಿನ ವಿವಿಧ ಸಂಘಟನೆಗಳಲ್ಲಿ ಜಿ.ಪರಮೇಶ್ವರಪ್ಪ ಸಕ್ರಿಯವಾಗಿದ್ದಾರೆ.
ಸತ್ಯನಾರಾಯಣ, ಎಲ್.ಎಂ.ಹೆಗಡೆ, ಡಾ. ಸರ್ಫ್ರಾಜ್ ಚಂದ್ರಗುತ್ತಿ, ಡಾ. ದೇವೇಂದ್ರಪ್ಪ, ವಿ.ಸಿ.ಪಾಟೀಲ್ ಇತರರಿದ್ದರು.