ಪಂಚ ಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಉತ್ಸವ ಸಮಿತಿಗೆ ಬಿ.ವೈ.ರಾಘವೇಂದ್ರ ಅಧ್ಯಕ್ಷ । Adda pallakki utsava

ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶ್ರೀ ರೇಣುಕ ಸ್ವಾಮೀಜಿ, ಶ್ರೀ ಡಾ. ಗುರುನಾಗಭೂಷಣ ಸ್ವಾಮೀಜಿ, ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಬಿ.ವೈ.ರಾಘವೇಂದ್ರ, ಆಯನೂರು ಮಂಜುನಾಥ, ಎಸ್.ಎನ್.ಚನ್ನಬಸಪ್ಪ, ಎಸ್.ರುದ್ರೇಗೌಡ, ಎಚ್.ಎಂ.ಚಂದ್ರಶೇಖರಪ್ಪ, ರುದ್ರಮುನಿ ಸಜ್ಜನ್ ಇದ್ದರು.
ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶ್ರೀ ರೇಣುಕ ಸ್ವಾಮೀಜಿ, ಶ್ರೀ ಡಾ. ಗುರುನಾಗಭೂಷಣ ಸ್ವಾಮೀಜಿ, ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ, ಬಿ.ವೈ.ರಾಘವೇಂದ್ರ, ಆಯನೂರು ಮಂಜುನಾಥ, ಎಸ್.ಎನ್.ಚನ್ನಬಸಪ್ಪ, ಎಸ್.ರುದ್ರೇಗೌಡ, ಎಚ್.ಎಂ.ಚಂದ್ರಶೇಖರಪ್ಪ, ರುದ್ರಮುನಿ ಸಜ್ಜನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ನೌಕರರ ಭವನದಲ್ಲಿ ಪೂರ್ವಭಾವಿ ಸಭೆ
  • ಪಂಚಪೀಠಾಧೀಶರ ಸಾನ್ನಿಧ್ಯದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ
  • ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಮಾಹಿತಿ
ಶಿವಮೊಗ್ಗ: ಶಿವಮೊಗ್ಗದಲ್ಲಿ 33 ವರ್ಷಗಳ ಬಳಿಕ ನಡೆಯುತ್ತಿರುವ ಪಂಚ ಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಉತ್ಸವ(Adda pallakki utsava) ಹಾಗೂ ಜನಜಾಗೃತಿ(Jana jagruti) ಧರ್ಮಸಭೆಯನ್ನು ಅಭೂತಪೂರ್ವವಾಗಿ ಆಚರಿಸಲು ನಿರ್ಧರಿಸಿದ್ದು, ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಪಂಚ ಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಜನಜಾಗೃತಿ ಧರ್ಮಸಭೆ(Dharma sabhe) ಆಯೋಜನೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗೌರವಾಧ್ಯಕ್ಷರಾಗಿ ಎಸ್.ರುದ್ರೇಗೌಡ, ಕಾರ್ಯಾಧ್ಯಕ್ಷರಾಗಿ ಆಯನೂರು ಮಂಜುನಾಥ, ಪ್ರಧಾನ ಕಾರ್ಯದರ್ಶಿಗಳಾಗಿ ಸಿ.ಎಸ್.ಷಡಾಕ್ಷರಿ ಮತ್ತು ಬಳ್ಳೆಕೆರೆ ಸಂತೋಷ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಬಿಳಕಿ, ತಾವರಕೆರೆ, ಯಡಿಯೂರು ಮತ್ತು ಮಳಲಿಮಠ(Malali matt)ದ ಶ್ರೀಗಳು ಮಾರ್ಗದರ್ಶಕರಾಗಿದ್ದು, ಉಪಾಧ್ಯಕ್ಷರಾಗಿ ಶಾಸಕರಾದ ಬಿ.ಕೆ.ಸಂಗಮೇಶ್ವರ, ಬಿ.ವೈ.ವಿಜಯೇಂದ್ರ(B.y.vijayendra), ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಟಿ.ವಿ.ಈಶ್ವರಯ್ಯ, ರುದ್ರಮುನಿ ಸಜ್ಜನ್, ಎಚ್.ಬಿ.ಮಹೇಶ್ವರಪ್ಪ, ವಿರೂಪಾಕ್ಷಪ್ಪ, ಖಜಾಂಚಿಯಾಗಿ ಎಸ್.ಪಿ.ದಿನೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಟಿ.ಬಿ.ಜಗದೀಶ್, ಮರುಳೇಶ್, ಶಿವಕುಮಾರ್, ರುದ್ರಾರಾಧ್ಯ, ಎಚ್.ಸಿ.ಯೋಗೇಶ್ ಮತ್ತಿತರರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. 
ಇಡೀ ರಾಜ್ಯದಲ್ಲೇ ಶಿವಮೊಗ್ಗ(Shivamogga) ಸುಸಂಸ್ಕೃತ ನಗರವಾಗಿದ್ದು, ರಾಜ್ಯದಲ್ಲಿ ಎಲ್ಲಿಯೂ ಆಗದಂತಹ ಕಾರ್ಯಕ್ರಮ ಇದಾಗಬೇಕು. ಅದರ ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆಯನ್ನು ಸಲ್ಲಿಸಬೇಕಿದೆ ಎಂದು ಶ್ರೀಗಳು ಹೇಳಿದರು. 
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಎಲ್ಲರೂ ಸೇರಿ ಅಡ್ಡ ಪಲ್ಲಕ್ಕಿ ಎಂಬ ರಥವನ್ನು ಎಳೆಯಬೇಕಿದೆ. ಒಟ್ಟಾಗಿ ರಥ ಎಳೆದರೆ ಮಾತ್ರ ಸಾರ್ಥಕವಾಗಲಿದೆ. ಅದಕ್ಕಾಗಿ ಸಮಾಜದವರು ಒಟ್ಟಾಗಿ ಉತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು.
ಯಡಿಯೂರು ಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂಎಲ್ಸಿ, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ರುದ್ರಮುನಿ ಸಜ್ಜನ್, ವಿರೂಪಾಕ್ಷಪ್ಪ ಇತರರಿದ್ದರು.

ಎಲ್ಲರೂ ಸೇರಿ ರಥ ಎಳೆಯಬೇಕು

ಪಂಚಪೀಠ(Pancha peeta)ಗಳ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ರಥವನ್ನು ಎಲ್ಲರೂ ಸೇರಿ ಎಳೆಯಬೇಕು. ಉತ್ಸವ ಯಶಸ್ವಿಯಾಗುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮನವಿ ಮಾಡಿದರು. ಇಡೀ ಸಮಾಜ ಪಾಲ್ಗೊಳ್ಳಬೇಕು. ಸಮಾಜದ ಸಂಘಟನೆ ಅಗಬೇಕು. ಸಮಾಜದ ಯುವಶಕ್ತಿಗೆ ದಾರಿ ದೀಪ ಆಗಬೇಕಿದೆ. ಮುಂದಿನ ಸಭೆಯಲ್ಲಿ ಸಮಾಜದ ಪದಾಧಿಕಾರಿಗಳಿಗೆ ಆಹ್ವಾನ ನೀಡಬೇಕು ಎಂದರು.
"

ಅಡ್ಡಪಲ್ಲಕ್ಕಿ ಉತ್ಸವ ಕುರಿತು ಎರಡನೇ ಪೂರ್ವಭಾವಿ ಸಭೆ ಇದಾಗಿದೆ. ಕೇದಾರೇಶ್ವರ ಗುರುಗಳು ಬರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಶ್ರೀಗಳು ಬರಲ್ಲ ಎಂದು ಸಾರ್ವಜನಿಕವಾಗಿ ಯಾರೂ ಮಾತನಾಡಬೇಡಿ. ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಬೇಕಿದೆ. ಅದಕ್ಕೆ ಎಲ್ಲರ ಸಹಕಾರ ಬೇಕಿದೆ.

ಅಡ್ಡಪಲ್ಲಕ್ಕಿ ಉತ್ಸವ ಧಾರ್ಮಿಕ ಪರಂಪರೆ

ಶಿವಮೊಗ್ಗದಲ್ಲಿ ಪಂಚಪೀಠಗಳ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಮಾಡುವುದು ಧಾರ್ಮಿಕ ಪರಂಪರೆಯಾಗಿದ್ದು, ಶ್ರೀಗಳ ಪುರ ಪ್ರವೇಶದ ಸಂಪ್ರದಾಯವಾಗಿ ನಡೆಯುವಂತೆ ನೋಡಿಕೊಳ್ಳಬೇಕಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು. ಸಮಾಜದ ಕಾರ್ಯಕ್ರಮ ಸಮಾಜದ ದೇಣಿಗೆಯಿಂದ ನಡೆಯಬೇಕೋ ವಿನಃ ಯಾರೋ ಒಬ್ಬರಿಂದ ಸಂಗ್ರಹಿಸಿ ಮಾಡುವಂತೆ ಆಗಬಾರದು. ಹಣ ಸಂಗ್ರಹ ಮಾಡುವುದು ದೊಡ್ಡದಲ್ಲ. ಜನ ಸಂಗ್ರಹ ಮಾಡಬೇಕು ಎಂದರು.

70 ಲಕ್ಷ ರೂ. ಅಂದಾಜು ವೆಚ್ಚ

ಪಂಚಪೀಠಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಶಿವಮೊಗ್ಗದಲ್ಲಿ ಇತಿಹಾಸ ನಿರ್ಮಾಣ ಆಗಬೇಕಿದೆ. ಅದಕ್ಕಾಗಿ ಸಂಪನ್ಮೂಲ ಕ್ರೋಡಿಕರಣ ಮುಖ್ಯ. ಒಟ್ಟಾರೆ 70.75 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ವೇದಿಕೆಯಲ್ಲಿ ಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡುವುದು, ಅಲ್ಲಮಪ್ರಭು ಮೈದಾನ ಅಥವಾ ಎನ್‌ಇಎಸ್ ಮೈದಾನವನ್ನು ಆಯ್ಕೆ ಮಾಡುವುದು, ಬಿ.ಎಸ್.ಯಡಿಯೂರಪ್ಪ ಅವರಿಗೆ ಸನ್ಮಾನಿಸುವುದು ಮುಖ್ಯವಾಗಿದೆ. ಜತೆಗೆ ಶರಣರ ಸಂತೆಗೆ ಅವಕಾಶ ನೀಡಲಿದ್ದು, 200 ಮಳಿಗೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಮುಖವಾಗಿ 10 ಸಮಿತಿ ರಚನೆ ಮಾಡಲಾಗುವುದು ಎಂದರು.
"

ಪಂಚ ಪೀಠಗಳ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ರಾಜಕೀಯದಲ್ಲಿ 50 ವರ್ಷ ಪೂರೈಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಅದ್ದೂರಿಯಾಗಿ ಅಭಿನಂದನೆ ಸಲ್ಲಿಸಬೇಕಿದೆ. ಅದಕ್ಕಾಗಿ ಸಮಾಜ ಒಗ್ಗಟ್ಟಾಗಬೇಕು. ನಾವೆಲ್ಲರೂ ಸಮಾಜದವರಿಗೆ ಕಾರ್ಯಕ್ರಮದ ಉದ್ದೇಶವನ್ನು ಮುಟ್ಟಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net