ಜೋಡಿ ಬ್ರಹ್ಮರಥಗಳ ಅನಾವರಣ 25ಕ್ಕೆ

ನಿರ್ಮಾಣದ ಅಂತಿಮ ಹಂತದಲ್ಲಿರುವ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ನೂತನ ರಥ.
ನಿರ್ಮಾಣದ ಅಂತಿಮ ಹಂತದಲ್ಲಿರುವ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ನೂತನ ರಥ.
Published on
ತೀರ್ಥಹಳ್ಳಿ: ತಾಲೂಕಿನ ಮೇಳಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಜೋಡಿ ಬ್ರಹ್ಮರಥಗಳನ್ನು ಜ.25ರಂದು ಹೊರನಾಡು ದೇವಾಲಯದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅನಾವರಣಗೊಳಿಸುವರು ಎಂದು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ.ಜಿ.ಹರೀಶ್ ಹೇಳಿದರು.
ಹಳೆಯ ರಥ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ನೂತನ ರಥ ನಿರ್ಮಿಸಲು ತೀರ್ಮಾನಿಸಲಾಗಿತ್ತು. ರಥಗಳ ಉದ್ಘಾಟನೆ ದಿನದಂದು ಶೃಂಗೇರಿ ಜಗದ್ಗುರುಗಳು ಆಗಮಿಸಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ಕೆ ಶುಭಕೋರುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಜೋಡಿ ರಥ ಎಳೆಯುವುದು ಕ್ಷೇತ್ರದ ವಿಶೇಷ. ರಥ 18 ಟನ್ ತೂಕವಿದೆ. ರಥಕ್ಕೆ ವಿಶೇಷ ಸ್ಟಿಯರಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಅಷ್ಟಭುಜದ ರಥದ ನಿರ್ಮಾಣ ಕಾರ್ಯವನ್ನು ಮೂರು ತಿಂಗಳಿನಿಂದ ಹರಿಹರಪುರದ ನಾಗರಾಜ ಆಚಾರ್ಯ ನೇತೃತ್ವದಲ್ಲಿ 10 ಶಿಲ್ಪಿಗಳು ನಿರ್ವಹಿಸುತ್ತಿದ್ದಾರೆ ಎಂದರು.
ರಥಕ್ಕೆ ಅಗತ್ಯವಿದ್ದ ಮರಗಳನ್ನು ಭಕ್ತರು ದೇಣಿಗೆಯಾಗಿ ನೀಡಿದ್ದಾರೆ. ದಾನಿಗಳು ಮತ್ತು ಅರಣ್ಯ ಇಲಾಖೆ ಸೇರಿ ಸರ್ಕಾರಿ ಅಧಿಕಾರಿಗಳ ಸಹಕಾರದಿಂದ ನಡೆದಿರುವ ಕಾರ್ಯ ಅಂತಿಮ ಹಂತ ತಲುಪಿದೆ ಎಂದು ತಿಳಿಸಿದರು.
ಶಿಲ್ಪಿ ಹರಿಹರಪುರದ ನಾಗರಾಜ ಆಚಾರ್ಯ ಮಾತನಾಡಿ, ರಥ ನಿರ್ಮಾಣ ದೇವಸ್ಥಾನ ನಿರ್ಮಾಣದಷ್ಟೇ ಪಾವಿತ್ರೃ ಹೊಂದಿದೆ ಎಂದರು. ರಥ ನಿರ್ಮಾಣ ಸಮಿತಿ ಕಾರ್ಯದರ್ಶಿ ಶ್ರೀನಿವಾಸ್, ಸದಸ್ಯ ಕೆಳಕೆರೆ ದಿವಾಕರ್, ಬಿ.ಗಣಪತಿ, ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net