ವಿದ್ಯುತ್​ ಖಾಸಗೀಕರಣ ಪ್ರಯತ್ನಕ್ಕೆ ಆಕ್ರೋಶ

ವಿದ್ಯುತ್​ ಕಂಪನಿಗಳ ಖಾಸಗೀಕರಣ ನೀತಿ ಖಂಡಿಸಿ ಸಾಗರದಲ್ಲಿ ವಿವಿಧ ಸಂಟನೆಗಳಿಂದ ಪ್ರತಿಭಟನೆ ನಡೆಯಿತು. ಎಚ್​.ಎಲ್​.ಶ್ರೀಧರ್​, ತೀ.ನ.ಶ್ರೀನಿವಾಸ್​, ಹಿತಕರ ಜೈನ್​, ಬಿ.ಎ.ಇಂದೂಧರ ಬೇಸೂರು ಇತರರಿದ್ದರು.
ವಿದ್ಯುತ್​ ಕಂಪನಿಗಳ ಖಾಸಗೀಕರಣ ನೀತಿ ಖಂಡಿಸಿ ಸಾಗರದಲ್ಲಿ ವಿವಿಧ ಸಂಟನೆಗಳಿಂದ ಪ್ರತಿಭಟನೆ ನಡೆಯಿತು. ಎಚ್​.ಎಲ್​.ಶ್ರೀಧರ್​, ತೀ.ನ.ಶ್ರೀನಿವಾಸ್​, ಹಿತಕರ ಜೈನ್​, ಬಿ.ಎ.ಇಂದೂಧರ ಬೇಸೂರು ಇತರರಿದ್ದರು.
Published on
ಸಾಗರ: ವಿದ್ಯುತ್​ ವಿತರಣಾ ವ್ಯವಸ್ಥೆಯ ಖಾಸಗೀಕರಣ ಪ್ರಕ್ರಿಯೆ ಖಂಡಿಸಿ ವಿದ್ಯುತ್​ ಖಾಸಗೀಕರಣ ವಿರೋಧಿ ಹೋರಾಟ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೆಸ್ಕಾಂ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು.
ವಿದ್ಯುತ್​ ಪ್ರಸರಣ ನಿಗಮದ ನೌಕರರ ಸಂದ ಮಾಜಿ ಉಪಾಧ್ಯ ಎಚ್​.ಎಲ್​.ಶ್ರೀಧರ್​ ಮಾತನಾಡಿ, ವಿದ್ಯುತ್​ ಪ್ರಸರಣವನ್ನು ಖಾಸಗೀಕರಣ ಮಾಡಿದಲ್ಲಿ ವಿದ್ಯುತ್​ ಬಳಕೆದಾರರ ಶೋಷಣೆಯಾಗಲಿದೆ. ಹಿಂದೆ ವಿದ್ಯುತ್​ ಕಂಪನಿಗಳ ಖಾಸಗೀಕರಣದ ವಿರುದ್ಧ ಸಂವು ಬೃಹತ್​ ಪ್ರತಿಭಟನೆ ನಡೆಸಿದಾಗ ವಿದ್ಯುತ್​ ನೀತಿ ಬದಲಾವಣೆ ಭರವಸೆ ಸಿಕ್ಕಿತ್ತು. ಇದೀಗ ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್​ ಸರಬರಾಜನ್ನು ಟಾಟಾ ಪವರ್​ ಕಂಪನಿಗೆ ನೀಡುವ ತಯಾರಿ ನಡೆಯುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್​ ಮಾತನಾಡಿ, ವಿದ್ಯುತ್​ ಪ್ರಸರಣವನ್ನು ಖಾಸಗೀಕರಣ ಮಾಡಬಾರದು. ಹಿಂದೆಯೂ ದೆಹಲಿಗೆ ಹೋಗಿ ವಿದ್ಯುತ್​ ಪ್ರಸರಣ ನಿಗಮದ ನೌಕರರು ಪ್ರತಿಭಟನೆ ನಡೆಸಿದ್ದಾರೆ ಎಂದರು.
ಹೋರಾಟ ಸಮಿತಿ ಸಂಚಾಲಕ ಹಿತಕರ ಜೈನ್​ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್​ ಪ್ರಸರಣ ವ್ಯವಸ್ಥೆ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಅದನ್ನು ಖಾಸಗಿಯವರಿಗೆ ವಹಿಸಿ ಹಾಳುಗೆಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಸಮಿತಿಯ ಬಿ.ಎ.ಇಂದೂಧರ ಬೇಸೂರು, ಕುಮಾರಸ್ವಾಮಿ ಕೊಪ್ಪ, ಮಲ್ಲಿಕಾರ್ಜುನ ಹಕ್ರೆ, ಫ್ರಾನ್ಸಿಸ್​ ಗೋಮ್ಸ್​, ಕಲಸೆ ಚಂದ್ರಪ್ಪ, ಮನೋಜ್​ ಕುಗ್ವೆ, ವಸೀಂ ಉಳ್ಳೂರು, ವೆಂಕಟೇಶ್​ ಮೆಳವರಿಗೆ, ದಿನೇಶ್​ ಶಿರವಾಳ, ರಮೇಶ್​ ಕೆಳದಿ, ಸುರೇಂದ್ರ ಇತರರಿದ್ದರು.
ಈಗಾಗಲೇ ಐದು ರಾಜ್ಯಗಳಲ್ಲಿ ವಿದ್ಯುತ್​ ಪ್ರಸರಣವನ್ನು ಖಾಸಗಿ ಕಂಪನಿಗಳಿಗೆ ನೀಡಿ ಗ್ರಾಹಕರಿಗೆ ಉತ್ತಮ ಸೇವೆ ಸಿಗುತ್ತಿಲ್ಲ ಎನ್ನುವ ದೂರು ಇದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ವಿದ್ಯುತ್​ ಪ್ರಸರಣ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವುದು ಬೇಡ. ಖಾಸಗೀಕರಣ ವಿರೋಧಿಸಿ 10 ಸಾವಿರಕ್ಕೂ ಹೆಚ್ಚು ಅಹವಾಲನ್ನು ಸಾಗರ ತಾಲೂಕಿನಿಂದ ಸಲ್ಲಿಸಲಾಗುವುದು.
> ಎಚ್​.ಎಲ್​.ಶ್ರೀಧರ್​
ವಿದ್ಯುತ್​ ಪ್ರಸರಣ ನಿಗಮದ ನೌಕರರ ಸಂದ ಮಾಜಿ ಉಪಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net