ಸಕ್ರೆಬೈಲು ಬಿಡಾರದ ಸಾಗರ್, ಭೀಷ್ಮ, ಅರ್ಜುನ, ಬಹದ್ದೂರ್, ಸೋಮಣ್ಣ ಹಾಗೂ ಮಕ್ನ ಆನೆಗಳನ್ನು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಕಾವಾಡಿಗಳು, ಮಾವುತರು, ಸಿಬ್ಬಂದಿ ಭಾಗವಹಿಸಿದ್ದಾರೆ. ಸಕ್ರೆಬೈಲಿನ ಮುಖ್ಯ ಪಶುವೈದ್ಯಾಧಿಕಾರಿ ಡಾ. ಮುಜೀಬ್ ಉರ್ ರಹಮಾನ್, ಡಾ. ಮುರಳಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಉಂಬ್ಳೇಬೈಲು, ತರೀಕೆರೆ, ಲಕ್ಕವಳ್ಳಿ, ಮಾವಿನಕಟ್ಟೆ ಭಾಗದ ಅರಣ್ಯ ಸಿಬ್ಬಂದಿಯೂ ಪಾಲ್ಗೊಂಡಿದ್ದಾರೆ.