ಒನಕೆ ಓಬವ್ವ ಶೌರ್ಯದ ಸಂಕೇತ

ಶಿವಮೊಗ್ಗದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿಯನ್ನು ಎಂಎಲ್‌ಸಿ ಬಲ್ಕಿಷ್ ಬಾನು ಉದ್ಘಾಟಿಸಿದರು. ಡಾ. ಕುಂದನ್ ಬಸವರಾಜ್, ಚಂದ್ರಭೂಪಾಲ, ಎಚ್.ಎಸ್.ಕುಮಾರಸ್ವಾಮಿ, ವಿ.ಅಭಿಷೇಕ್ ಇತರರಿದ್ದರು.
ಶಿವಮೊಗ್ಗದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿಯನ್ನು ಎಂಎಲ್‌ಸಿ ಬಲ್ಕಿಷ್ ಬಾನು ಉದ್ಘಾಟಿಸಿದರು. ಡಾ. ಕುಂದನ್ ಬಸವರಾಜ್, ಚಂದ್ರಭೂಪಾಲ, ಎಚ್.ಎಸ್.ಕುಮಾರಸ್ವಾಮಿ, ವಿ.ಅಭಿಷೇಕ್ ಇತರರಿದ್ದರು.
Published on
ಶಿವಮೊಗ್ಗ: ತನ್ನ ಒನಕೆಯನ್ನೇ ಆಯುಧ ಮಾಡಿಕೊಂಡು ವೈರಿಪಡೆಯನ್ನು ದಿಟ್ಟತನದಿಂದ ಎದುರಿಸಿದ ವೀರಮಹಿಳೆ ಒನಕೆ ಓಬವ್ವ ಧೈರ್ಯ ಮತ್ತು ಶೌರ್ಯದ ಪ್ರತೀಕ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ಆಶ್ರಯದಲ್ಲಿ ಮಂಗಳವಾರ ನಗರದ ಕುವೆಂಪು ರಂಗಮಅದಿರದಲ್ಲಿ ಏರ್ಪಡಿಸಲಾಗಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
ಹೆಣ್ಣು ಮಕ್ಕಳಿಗೆ ಜನ್ಮತಃ ಧೈರ್ಯ, ಸ್ಥೈರ್ಯ, ಕುಟುಂಬ ನಿರ್ವಹಣೆಯ ಚಾಕಚಕ್ಯತೆ ದೇವರು ಕೊಟ್ಟ ವರ. ಓಬವ್ವ ಪತಿ ತನಗೆ ವಹಿಸಿದ ಜವಾಬ್ದಾರಿಯನ್ನು ತಾನೊಂದು ಹೆಣ್ಣು ಎಂದೂ ಎಣಿಸದೆ, ಜೀವದ ಹಂಗು ತೊರೆದು, ಧೈರ್ಯದಿಂದ ನಿರ್ವಹಿಸುವ ಮೂಲಕ ಹೈದರಾಲಿ ಸೇನೆಯನ್ನು ಬಗ್ಗುಬಡಿದ ಈಕೆ ಎಲ್ಲರಿಗೂ ಮಾದರಿ ಮತ್ತು ಕರ್ತವ್ಯಪ್ರಜ್ಞೆಯ ಸಂಕೇತ. ಇಂತಹ ವೀರ ಮಹಿಳೆಯನ್ನು ಪಡೆದ ನಮ್ಮ ಸಮಾಜ ನಿಜಕ್ಕೂ ಪುಣ್ಯ ಮಾಡಿದೆ. ನಮ್ಮ ಸಮಾಜವನ್ನು ಕಾಪಾಡಲು ಮತ್ತು ಏಳಿಗೆಗಾಗಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
 ಜಾತಿ, ಧರ್ಮ, ಭಾಷೆ ಮರೆತು ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅವರ ನೇತೃತ್ವದಲ್ಲಿ ಒಟ್ಟಾದ ರೀತಿ ಇಂದು ಸಹ ನಾವು ಒಟ್ಟಾಗಿರುವ ಅವಶ್ಯಕತೆ ಇದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಮಗೆಲ್ಲ ದಾರಿದೀಪ. ಎಲ್ಲರೂ ಸಾಮರಸ್ಯದಿಂದ ಬಾಳೋಣ ಎಂದು ಹೇಳಿದರು.
 ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ ಮಾತನಾಡಿ, ಒನಕೆ ಓಬವ್ವ ಎಂಬ ಹೆಸರೇ ಒಂದು ಶಕ್ತಿ. ಧೈರ್ಯಕ್ಕೆ ಮಾದರಿಯಾದ ಮಹಿಳೆ. ಚಿತ್ರದುರ್ಗ ಕೋಟೆಯನ್ನು ರಕ್ಷಿಸಿದ ವೀರವನಿತೆ. ಒನಕೆ ಓಬವ್ವ ಯಾರೆಂದು ನಮ್ಮ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಯುವಜನತೆಗೆ ತಿಳಿಸಬೇಕು. ಛಲವಾದಿ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಎಚ್.ಎಸ್.ಕುಮಾರಸ್ವಾಮಿ, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಎಎಸ್‌ಪಿ ರಮೇಶ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ನಿವೃತ್ತ ನ್ಯಾಯಾಧೀಶ ದೇವೇಂದ್ರ, ಸಮಾಜದ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net