ಉಳಿದಂತೆ ಚಂದ್ರಗುತ್ತಿ, ಮಣ್ಣತ್ತಿ, ಕತವಾಯಿ, ಜೋಳದಗುಡ್ಡೆ ಸೇರಿ ಹಲವೆಡೆ ಭಾರಿ ಗಾಳಿ ಮಳೆಗೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಉಳವಿ ಹೋಬಳಿಯ ಕೊಂಡಗಳಲೆ, ತಳೆಬೈಲು ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಕಂಬಗಳು ಮುರಿದುಬಿದ್ದಿವೆ. ಹಾಲಗಳಲೆಯ ಉಮೇಶ್ ಗೌಡ ಎಂಬುವರ ಮನೆ ಮೇಲೆ ಮೇಲ್ಛಾವಣಿ ಗಾಳಿಯ ರಭಸಕ್ಕೆ ದೂರದವರೆಗೆ ಹಾರಿ ಹೋಗಿದ್ದು ಅಚ್ಚರಿ ಉಂಟುಮಾಡಿದೆ. ಚಿಮಣೂರಿನಲ್ಲಿ ಸಿಡಿಲು ಬಡಿದು ಅಡಿಕೆ ಮರಗಳು ಹಾನಿಗೀಡಾಗಿವೆ. ನಿರಂತರ ಜ್ಯೋತಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದುದರಿಂದ ಶಿಗ್ಗಾ, ಕೊಳವಳ್ಳಿ, ಕುಂಬತ್ತಿ, ಹೆಗ್ಗೋಡ್, ಹಾಲಗಳಲೆ, ಚಿಮಣೂರು, ಗದ್ದಮನೆ ಸೇರಿ ಹಲವು ಗ್ರಾಮಗಳಲ್ಲಿ ಜನರು ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆದಿದ್ದಾರೆ.