ಮೂಡಿಗೆರೆ ಪಟ್ಟಣ ಪಂಚಾಯಿತಿಗೆ ನೋಟಿಸ್

ಪೊಲೀಸ್ ಠಾಣೆ
ಪೊಲೀಸ್ ಠಾಣೆ
Published on
ಮೂಡಿಗೆರೆ: ಪಟ್ಟಣದ ಲಯನ್ಸ್ ವೃತ್ತ, ಪೊಲೀಸ್ ಠಾಣೆ ಮುಂಭಾಗದ ವೃತ್ತ, ಎಂ.ಜಿ.ರಸ್ತೆ, ಕೆ.ಎಂ.ರಸ್ತೆ, ಮೇಗಳಪೇಟೆ, ಅಮರ್ ಜವಾನ್ ಸ್ಮಾರಕ, ಗೆಂಡೆಹಳ್ಳಿ ರಸ್ತೆ, ಗಂಗನಮಕ್ಕಿ ಮುತ್ತಿತರ ಕಡೆಗಳಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ಫ್ಲೆಕ್ಸೃ್, ಬ್ಯಾನರ್ ಕಟ್ಟುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಪಪಂ ಅಧಿಕಾರಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಪಪಂನಿಂದ ಅನುಮತಿ ಪಡೆಯದೆ ಪಟ್ಟಣದ ವಿವಿಧ ಕಡೆ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ದೊಡ್ಡ ಗಾತ್ರದ ಫ್ಲೆಕ್ಸೃ್ ಮತ್ತು ಬ್ಯಾನರ್‌ಗಳನ್ನು ಕಟ್ಟಲಾಗುತ್ತಿದೆ. ಇದರಿಂದ ವಾಹನಗಳಿಗೆ ರಸ್ತೆ ಕಾಣದೆ ಹಲವು ಅಪಘಾತಗಳು ನಡೆದಿದೆ. ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಿಂದಿನ ಜಿಲ್ಲಾಧಿಕಾರಿ, ಎಸ್‌ಪಿಗೆ ದೂರು ನೀಡಿದಾಗ ಹಿಂದಿನ ಡಿಸಿ ಪಟ್ಟಣದಲ್ಲಿರುವ ಎಲ್ಲ ಫ್ಲೆಕ್ಸೃ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಪಪಂ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ ಪಪಂ ಅಧಿಕಾರಿಗಳು ಫ್ಲೆಕ್ಸೃ್, ಬ್ಯಾನರ್‌ಗಳನ್ನು ಮಾತ್ರ ತೆರವುಗೊಳಿಸಿದರು. ಅದನ್ನು ಕಟ್ಟಿದವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ.
ಡಿಸಿ ವರ್ಗಾವಣೆಗೊಂಡ ಮರುದಿನ ಮತ್ತೆ ಲಯನ್ಸ್ ವಿರುದ್ಧ ಸೇರಿದಂತೆ ಪಟ್ಟಣದ ಎಲ್ಲ ಕಡೆ ದೊಡ್ಡ ಗಾತ್ರದ ಫ್ಲೆಕ್ಸೃ್, ಬ್ಯಾನರ್‌ಗಳನ್ನು ಕಟ್ಟಲಾಗಿದೆ. ಇವುಗಳನ್ನು ತೆರವುಗೊಳಿಸುವಂತೆ ತಾಲೂಕು ಆಡಳಿತಕ್ಕೆ ಸ್ಥಳೀಯರು ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಎಸ್ಪಿ ಜಿತೇಂದ್ರ ಕುಮಾರ್ ದಯಾಮಗೆ ಸ್ಥಳೀಯರು ನೀಡಿದ ದೂರಿನ ತನಿಖೆ ನಡೆಸಿ ವರದಿ ನೀಡುವಂತೆ ಮೂಡಿಗೆರೆ ಪಿಎಸ್‌ಐ ಹರ್ಷವರ್ಧನ್‌ಗೆ ಸೂಚಿಸಿದ್ದರು. ತನಿಖೆ ನಡೆಸಿದ ಪಿಎಸ್‌ಐ ವರ್ಧನ್ ಅವರು ಎಸ್‌ಪಿ ಆದೇಶದಂತೆ ಪಪಂಗೆ ನೋಟಿಸ್ ಜಾರಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net