ಮೂವರು ಚಾಲಕರಿಂದ ಮದ್ಯ ಸೇವನೆ: ಬುಧವಾರ ಸಂಚಾರ ಠಾಣೆ ಪೊಲೀಸರು 45 ಖಾಸಗಿ ಸಿಟಿ ಬಸ್(Private city bus)ಗಳ ತಪಾಸಣೆ ನಡೆಸಿದರು. ಚಾಲಕರ ದಾಖಲೆಗಳು, ವಾಹನಗಳ ಸುರಕ್ಷತಾ ವ್ಯವಸ್ಥೆ ಹಾಗೂ ಬ್ರೆತ್ ಅನಾಲೈಸರ್ ಮೂಲಕ ಮದ್ಯಸೇವನೆ ಪರೀಕ್ಷೆ ನಡೆಸಿದರು. ಮೂವರು ಚಾಲಕರು ಮದ್ಯಪಾನ ಮಾಡಿ ಖಾಸಗಿ ಸಿಟಿ ಬಸ್ ಚಲಾಯಿಸುತ್ತಿರುವುದು ದೃಢಪಟ್ಟಿದ್ದು, ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಯಿತು.