ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

ಆನಂದಪುರ ಸಮೀಪದ ಗಿಳಾಲಗುಂಡಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ಡಿ.ಪ್ರಮೀಳಾ, ಟಿ.ಎಸ್.ಸತ್ಯನಾರಾಯಣ, ಶೀಲಾ, ಪವಿತ್ರಾ ಇತರರಿದ್ದರು.
ಆನಂದಪುರ ಸಮೀಪದ ಗಿಳಾಲಗುಂಡಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ಡಿ.ಪ್ರಮೀಳಾ, ಟಿ.ಎಸ್.ಸತ್ಯನಾರಾಯಣ, ಶೀಲಾ, ಪವಿತ್ರಾ ಇತರರಿದ್ದರು.
Published on
ಆನಂದಪುರ: ಸಮೀಪದ ಗಿಳಾಲಗುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಆರ್.ಕೆ.ಫೌಂಡೇಷನ್ ಹಾಗೂ ಅಲೆಜಿಯನ್ ಸಂಸ್ಥೆಯಿಂದ ನೋಟ್‌ಬುಕ್ ವಿತರಿಸಲಾಯಿತು.
ಮುಖ್ಯಶಿಕ್ಷಕಿ ಡಿ.ಪ್ರಮೀಳಾ ಮಾತನಾಡಿ, ಬೆಂಗಳೂರಿನಲ್ಲಿ 2008ರಿಂದ ಜಿ.ಕಿರಣ್ ಸಾಗರ ನೇತೃತ್ವದಲ್ಲಿ ಸಂಸ್ಥೆ ಆರಂಭಗೊಂಡಿದ್ದು, ವಿವಿಧ ಜಿಲ್ಲೆಗಳ 360ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ಕೊಡುಗೆ ನೀಡಿದೆ ಎಂದು ತಿಳಿಸಿದರು.
ನೋಟ್‌ಬುಕ್, ಪೆನ್, ಡೆಸ್ಕ್, ಸ್ಮಾರ್ಟ್ ಕ್ಲಾಸ್, ವಾಟರ್ ಫಿಲ್ಟರ್‌ಗಳನ್ನು ಸರ್ಕಾರಿ ಶಾಲೆಗೆ ನೀಡುತ್ತಿದ್ದು, ಟೀಚ್ ಬೆಂಗಳೂರು ಯೋಜನೆಯಡಿ ಇಂಗ್ಲಿಷ್ ಕಲಿಕೆ, ಜೀವನ ಕೌಶಲ ತರಬೇತಿ, ಉದ್ಯಮಶೀಲತೆ ಮತ್ತು ಕಂಪ್ಯೂಟರ್ ಕಲಿಕೆ, ಗ್ರಿನ್ ಯುವ ಯೋಜನೆಯಡಿ ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಸ್.ಸತ್ಯನಾರಾಯಣ, ಕ್ರಿಯಾಶೀಲ ತಾರೆಯರ ಟ್ರಸ್ಟ್ ಸದಸ್ಯೆ ಶೀಲಾ, ಪವಿತ್ರಾ, ಸಹಶಿಕ್ಷಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net