ಕಳೂರು ಶಾಲೆಯಲ್ಲಿ ಕಾಯಂ ಶಿಕ್ಷಕರೇ ಇಲ್ಲ | Parents protest

ತುಮರಿ ಸಮೀಪದ ಕಳೂರು ಸರ್ಕಾರಿ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಮೇಶ್, ಇಸಿಒ ದಿನೇಶ್ ಅವರಿಗೆ ಮನವಿ ಸಲ್ಲಿಸಿದರು. ಓಂಕಾರ್, ಓಂಕಾರ್ ಜೈನ್, ರಾಜೇಶ್, ಡಾಕಪ್ಪ ಇತರರಿದ್ದರು.
ತುಮರಿ ಸಮೀಪದ ಕಳೂರು ಸರ್ಕಾರಿ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಮೇಶ್, ಇಸಿಒ ದಿನೇಶ್ ಅವರಿಗೆ ಮನವಿ ಸಲ್ಲಿಸಿದರು. ಓಂಕಾರ್, ಓಂಕಾರ್ ಜೈನ್, ರಾಜೇಶ್, ಡಾಕಪ್ಪ ಇತರರಿದ್ದರು.
Published on
ತುಮರಿ: ಶೈಕ್ಷಣಿಕ ವರ್ಷ ಆರಂಭವಾಗಿ 15 ದಿನಗಳಾದರೂ ಸಾಗರ ತಾಲೂಕಿನ ಕಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲದೆ ತರಗತಿಗಳು ಸ್ಥಗಿತಗೊಂಡಿದ್ದರಿಂದ ಆಕ್ರೋಶಗೊಂಡ ಪಾಲಕರು ಸೋಮವಾರ ಶಾಲೆಯ ಗೇಟ್‌ಗೆ ಬೀಗ ಹಾಕಿ, ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಇನ್ನೂ ಶಿಕ್ಷಕರ ಕೊರತೆ ಸಮಸ್ಯೆ ಇದೆ. ಕಳೂರು ಶಾಲೆಯಲ್ಲಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲೂ ಸಹ ಶಿಕ್ಷಕರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಶಿಕ್ಷಣ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು.
ಶಾಲೆ ಶುರುವಾಗಿ ಇಷ್ಟು ದಿನಗಳಾದರೂ ನಮಗೆ ಸರಿಯಾಗಿ ಪಾಠ ಮಾಡಲು ಒಬ್ಬರೇ ಒಬ್ಬರು ಶಿಕ್ಷಕರಿಲ್ಲ. ನಾವು ಶಾಲೆಗೆ ಬಂದು ಸುಮ್ಮನೆ ಕುಳಿತು ವಾಪಸ್ ಹೋಗುವಂತಾಗಿದೆ. ನಮಗೆ ತಕ್ಷಣ ಶಿಕ್ಷಕರನ್ನು ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು. ಶಿಕ್ಷಕರನ್ನು ಕೂಡಲೇ ನೇಮಕ ಮಾಡಬೇಕು. ಅಲ್ಲಿಯವರೆಗೆ ಶಾಲೆಯ ಬೀಗ ತೆರೆಯುವುದಿಲ್ಲ ಎಂದು ಪಟ್ಟುಹಿಡಿದರು.
ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿ ಮಾತನಾಡಿದ ಇಸಿಒ ದಿನೇಶ್, ಇಲ್ಲಿನ ಪರಿಸ್ಥಿತಿ ನನಗೆ ಅರ್ಥವಾಗಿದೆ. ಈ ಕುರಿತು ತಕ್ಷಣ ಮೇಲಾಧಿಕಾರಿಗಳ ಜತೆ ಚರ್ಚಿಸಿ, ಶಾಲೆಗೆ ಶಿಕ್ಷಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳುತ್ತೇಬೆ ಎಂದು ಭರವಸೆ ನೀಡಿದರು. ಕೂಡಲೇ ಶಿಕ್ಷಕರು ಬಾರದಿದ್ದರೆ ಹೋರಾಟ ಮತ್ತೆ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಓಂಕಾರ್, ಓಂಕಾರ್ ಜೈನ್ ಕಂದ್ರವಳ್ಳಿ, ರಾಜೇಶ್ ಕಳೂರು, ಸ್ಥಳೀಯರಾದ ಡಾಕಪ್ಪ, ಮಹಾವೀರ, ಸಿದ್ಧಾರ್ಥ, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net