ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವುದು ಮಹಾಮಂಡಳದ ಪ್ರಮುಖ ಉದ್ದೇಶವಾಗಿದ್ದು, ಅಡಿಕೆಗೆ ಸಂಬಂಧಿಸಿ ಎದುರಾಗುವ ಕಾನೂನು, ಆಡಳಿತಾತ್ಮಕ ಹಾಗೂ ಮಾರುಕಟ್ಟೆ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸಲಾಗುತ್ತಿದೆ. 2-3 ವರ್ಷಕ್ಕೊಮ್ಮೆ ಇಂತಹ ಸಮಸ್ಯೆಗಳು ಮರುಕಳಿಸುತ್ತವೆ ಎಂದು ತಿಳಿಸಿದರು. ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್, ಸೂರ್ಯನಾರಾಯಣ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ಶರ್ಮ ಸುದ್ದಿಗೋಷ್ಠಿಯಲ್ಲಿದ್ದರು.