ಭದ್ರಾ ನಾಲೆಗೆ ಹಾರಿದ ನವ ವಿವಾಹಿತೆ | suicide

ಲತಾ
ಲತಾ
Published on
ಹೊಳೆಹೊನ್ನೂರು: ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ನಿವಾಸಿ, ನವ ವಿವಾಹಿತೆ ಲತಾ (27) ಎಂಬುವರು ಡೆತ್‌ನೋಟ್ ಬರೆದಿಟ್ಟು ಭದ್ರಾವತಿ ತಾಲೂಕಿನ ಹಂಚಿನಸಿದ್ದಾಪುರ ಸಮೀಪದ ಭದ್ರಾ ನಾಲೆಗೆ ಮಂಗಳವಾರ ಹಾರಿದ್ದಾರೆ.
ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿಯ ಪರಮೇಶ್ವರಪ್ಪ ಮತ್ತು ರುದ್ರಮ್ಮ ದಂಪತಿ ಪುತ್ರಿ ಲತಾ ಅವರನ್ನು ಕಳೆದ ಏಪ್ರಿಲ್ನಲ್ಲಿ ಶಿಕಾರಿಪುರ ತಾಲೂಕು ದಿಂಡದಹಳ್ಳಿಯ ಕೆಪಿಸಿಎಲ್ ಎಇಇ ಗುರುರಾಜ್ ಎಂಬುವರಿಗೆ ವಿವಾಹ ಮಾಡಿಕೊಟ್ಟಿದ್ದರು. ಗಂಡನ ಮನೆಯವರಿಂದ ನಾನಾ ರೀತಿಯ ಹಿಂಸೆ ಎಂದು ಡೆತ್ ನೋಟ್ ಬರೆದಿಟ್ಟು ನಾಲೆಗೆ ಹಾರಿದ್ದಾರೆ.
ತನ್ನ ಸಾವಿಗೆ ನಾಗರತ್ನಮ್ಮ, ರಾಜೇಶ್ವರಿ, ಶಾರದಮ್ಮ, ಗುರುರಾಜ್ ಹಾಗೂ ಕೃಷ್ಣಪ್ಪ ಕಾರಣ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಈ ಐದೂ ಜನ ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ನಾನು ಮದುವೆ ಆಗಿದ್ದ ಹುಡುಗ ಒಳ್ಳೆಯವರು ಎಂದುಕೊಂಡಿದ್ದೆ. ಆದರೆ ಅವರ ಅಕ್ಕ, ಅಮ್ಮ ಹಾಗೂ ಮಾವನ ಮಾತು ಕೇಳಿ ನನ್ನ ಪತಿಯೂ ನಾಟಕೀಯವಾಗಿ ವರ್ತನೆ ಮಾಡಿದರು. ಇದರಿಂದ ಸಾಕಷ್ಟು ಅವಮಾನ ಮಾಡಿಸಿಕೊಂಡಿದ್ದೇನೆ. ಇದನ್ನು ಓದುತ್ತಿರುವವರು ನನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಲತಾ ವಿವರವಾಗಿ ಬರೆದುಕೊಂಡಿದ್ದಾರೆ.
ನಾಲೆಯ ದಂಡೆಯಲ್ಲಿ ಮೊಬೈಲ್ ಹಾಗೂ ಮಹಿಳೆಯ ಬಟ್ಟೆಗಳು ದೊರೆತಿವೆ. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಮಂಗಳವಾರ ನಾಲೆಯಲ್ಲಿ ಶೋಧ ಕಾರ್ಯ ನಡೆಸಿದರೂ ಲತಾ ಪತ್ತೆಯಾಗಿಲ್ಲ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net