ಶಿವಶರಣ ಸ್ಮರಣೆಯಿಂದ ಹೊಸ ಚೈತನ್ಯ | Hadapada Appanna Jayanti

ಶಿಕಾರಿಪುರದಲ್ಲಿ ಹಡಪದ ಅಪ್ಪಣ್ಣ ಅವರ ಜಯಂತಿಯಲ್ಲಿ ಶಾಸಕ ಬಿ.ವೈ.ವಿಜಯೇಂದ್ರ, ಶಿವಕುಮಾರ್, ಲೋಕೇಶಪ್ಪ, ಉದಯಕುಮಾರ್, ವೀರಭದ್ರಪ್ಪ ಇತರರಿದ್ದರು.
ಶಿಕಾರಿಪುರದಲ್ಲಿ ಹಡಪದ ಅಪ್ಪಣ್ಣ ಅವರ ಜಯಂತಿಯಲ್ಲಿ ಶಾಸಕ ಬಿ.ವೈ.ವಿಜಯೇಂದ್ರ, ಶಿವಕುಮಾರ್, ಲೋಕೇಶಪ್ಪ, ಉದಯಕುಮಾರ್, ವೀರಭದ್ರಪ್ಪ ಇತರರಿದ್ದರು.
Published on
ಶಿಕಾರಿಪುರ: ಶರಣರೆಂದರೆ ನುಡಿದಂತೆ ನಡೆದವರು. ಸಾಮಾಜಿಕ ಕಳಕಳಿಯ ಸಾಕ್ಷಿರೂಪ. ಅವರ ಸ್ಮರಣೆಯಿಂದ ನಮಗೆ ಸದಾ ಚೈತನ್ಯ ಸಿಗುತ್ತದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಹಡಪದ ಸಮಾಜ, ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿದ ಅವರು, ಅಪ್ಪಣ್ಣ ಅವರ ತತ್ವಾದರ್ಶಗಳು ಸಾರ್ವಕಾಲಿಕ ಎಂದರು.
12ನೇ ಶತಮಾನದ ಶರಣ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಪ್ಪಣ್ಣ ಅವರ ತತ್ವ ಹಾಗೂ ವಿಚಾರಧಾರೆಗಳು ಸಮಾಜಕ್ಕೆ ಸದಾ ದಾರಿದೀಪ. ಸಮಾನತೆ, ಕಾಯಕ ತತ್ವ ಮತ್ತು ದಾಸೋಹ ಸಂಸ್ಕೃತಿಯನ್ನು ಎತ್ತಿಹಿಡಿದ ಶರಣರ ಜೀವನ ಪ್ರತಿಯೊಬ್ಬರಿಗೂ ಮಾದರಿ. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಚೇತನ ಎಂದು ಬಣ್ಣಿಸಿದರು.
ಅಪ್ಪಣ್ಣ ಅವರ ಚಿಂತನೆಗಳನ್ನು ಯುವ ಪೀಳಿಗೆಗೆ  ತಲುಪಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಬಸವಣ್ಣನವರ ನಿಕಟವರ್ತಿಯಾಗಿದ್ದ ಅವರು ಆಪ್ತ ಕಾರ್ಯದರ್ಶಿ, ಬಲಗೈ ಬಂಟನಾಗಿ ನಿಷ್ಠೆಯಿಂದ ಕಾಯಕ ನಿರ್ವಹಿಸಿದವರು. ವಿಶ್ವದ ಮೊದಲ ಪ್ರಜಾಪ್ರಭುತ್ವದ ಮಾದರಿ ಎನಿಸಿದ ಅನುಭವ ಮಂಟಪದ ಚಟುವಟಿಕೆಗಳಲ್ಲಿ ಹಾಗೂ ಕಲ್ಯಾಣ ಕ್ರಾಂತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದರು.
ಹಡಪದ ಸಮಾಜ ಅತಿ ಸಣ್ಣ ಸಮಾಜ. ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದೆ ಬರಬೇಕು. ನೀವು ಮೊದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಆಗ ಸಮುದಾಯ ಇನ್ನಷ್ಟು ಪ್ರಖರವಾಗಿ ಬೆಳೆಯುತ್ತದೆ. ನಿಮ್ಮ ಕಾಯಕ ನಿಷ್ಠೆ, ಸ್ವಾಭಿಮಾನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ತಿಳಿಸಿದರು.
ಹಡಪದ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ್, ಗೌರವಾಧ್ಯಕ್ಷ ಲೋಕೇಶಪ್ಪ, ಉದಯಕುಮಾರ್, ವೀರಭದ್ರಪ್ಪ, ಸುರೇಶ್, ಪ್ರಕಾಶ್, ವಿರೂಪಾಕ್ಷಪ್ಪ, ರಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net