ಪರಿಸರದೊಂದಿಗೆ ನಮ್ಮ ಜೀವನ ದೂರವಾಗುತ್ತಿದ್ದು, ಪ್ರಕೃತಿ ನಾಶ ಮಾಡುತ್ತಿದ್ದೇವೆ. ಇದರ ಪರಿಣಾಮ ಇಂದು ಅನುಭವಿಸುವಂತಾಗಿದೆ. ಆಧುನಿಕ ಜೀವನಶೈಲಿ ಪರಿಸರಕ್ಕೆ ಮಾರಕವಾಗುತ್ತಿದ್ದರೂ ನಾವು ಸ್ವಾರ್ಥಕ್ಕಾಗಿ ಅದನ್ನೇ ಅಭಿವೃದ್ಧಿ ಎಂದು ಭಾವಿಸುತ್ತಿದ್ದೇವೆ. ಮುಂದಿನ ಪೀಳಿಗೆಗೆ ಅತ್ಯಂತ ದುಸ್ತರವಾದ ಬದುಕನ್ನು ಬಿಟ್ಟು ಹೋಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.