ಪ್ರಕೃತಿ ರಕ್ಷಣೆಗೆ ಅಸಡ್ಡೆ ಸಲ್ಲದು | environmental day

ಶಿವಮೊಗ್ಗ ಸಮೀಪದ ಗಾಜನೂರು ಜವಾಹರ ನವೋದಯ ವಿದ್ಯಾಲಯದ ಆವರಣದಲ್ಲಿ ಆರನೇ ತರಗತಿ ಮಕ್ಕಳ ತಾಯಂದಿರು ಮಗುವಿನ ಜತೆಗೆ ಗಿಡ ನೆಟ್ಟರು. ಪ್ರಾಚಾರ್ಯ ಕೆ.ಎಂ.ಜೋಸ್ ಇತರರಿದ್ದರು.
ಶಿವಮೊಗ್ಗ ಸಮೀಪದ ಗಾಜನೂರು ಜವಾಹರ ನವೋದಯ ವಿದ್ಯಾಲಯದ ಆವರಣದಲ್ಲಿ ಆರನೇ ತರಗತಿ ಮಕ್ಕಳ ತಾಯಂದಿರು ಮಗುವಿನ ಜತೆಗೆ ಗಿಡ ನೆಟ್ಟರು. ಪ್ರಾಚಾರ್ಯ ಕೆ.ಎಂ.ಜೋಸ್ ಇತರರಿದ್ದರು.
Published on
ಶಿವಮೊಗ್ಗ: ಕುಡಿಯುವ ನೀರು, ಗಾಳಿ, ಆಹಾರ ಸಿಗುವುದು ಪರಿಸರದಿಂದಲೇ ಎಂಬುದು ಗೊತ್ತಿದ್ದರೂ ಪ್ರಕೃತಿ ರಕ್ಷಣೆ ವಿಷಯದಲ್ಲಿ ನಿರ್ಲಕ್ಷೃ ತೋರುತ್ತಿದ್ದೇವೆ ಎಂದು ಗಾಜನೂರು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಕೆ.ಎಂ.ಜೋಸ್ ಹೇಳಿದರು.
ಶಿವಮೊಗ್ಗ ಸಮೀಪದ ಗಾಜನೂರು ಪಿಎಂ ಶ್ರೀ ಜವಾಹರ ನವೋದಯ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ‘ತಾಯಿ ಮತ್ತು ಮಗುವಿಗೊಂದು ಮರ’ ಕಾರ್ಯಕ್ರಮದಲ್ಲಿ ಮಾತನಾಡಿದರು.
6ನೇ ತರಗತಿಗೆ ಹೊಸದಾಗಿ ದಾಖಲಾಗುವ ಮಕ್ಕಳಿಗಾಗಿ ನಾವು ಪ್ರತಿ ವರ್ಷ ತಾಯಿ ಮತ್ತು ಮಗುವಿನ ಜತೆ ವಿದ್ಯಾಲಯದ ಆವರಣದಲ್ಲಿ ಗಿಡಗಳನ್ನು ಬೆಳೆಸುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಪಾಲಕರಿಗೆ ತಲಾ ಒಂದೊಂದು ಸಸಿ ತರಲು ಸೂಚಿಸಿದ್ದೆವು. ಅದರಂತೆ ಹಣ್ಣಿನ ಮತ್ತು ಹೂವಿನ ಸಸಿಗಳನ್ನು ತಂದಿದ್ದಾರೆ ಎಂದರು.
ಕನ್ನಡ ಶಿಕ್ಷಕ ನವೀನ್ ನಾಯಕ್ ಮಾತನಾಡಿ, ನಾವು ಮಕ್ಕಳಿಗೆ ತೋರುವಷ್ಟೇ ಕಾಳಜಿ, ಪ್ರೀತಿಯನ್ನು ಗಿಡಗಳನ್ನು ನೆಟ್ಟ ಮೇಲೆ ಮಕ್ಕಳಂತೆಯೇ ಪಾಲನೆ-ಪೋಷಣೆ ಮಾಡಬೇಕು. ಅಭಿವೃದ್ಧಿ ನೆಪದಲ್ಲಿ ಕಾಡುಗಳ ನಾಶದಿಂದ ವನ್ಯಜೀವಿಗಳ ಆವಾಸಕ್ಕೆ ತೊಂದರೆಯಾಗಿದೆ. ಅವುಗಳು ಜನವಸತಿ ಪ್ರದೇಶಗಳತ್ತ ನುಗ್ಗುವಂತಹ ಸ್ಥಿತಿಗೆ ನಾವೇ ಕಾರಣರು. ವನ್ಯಸಂಪತ್ತು ರಕ್ಷಿಸುವ ಹೊಣೆಗಾರಿಕೆ ಎಲ್ಲರದು ಎಂದು ಹೇಳಿದರು.
ಉಪಪ್ರಾಚಾರ್ಯ ಜಾನ್ಸನ್ ಪಿ. ಜೇಮ್ಸ್, ಶಿಕ್ಷಕರಾದ ಶರಣಪ್ಪ ನಾಯಕರ, ರಾಮಚಂದ್ರಪ್ಪ, ನವೀನ್ ನಾಯ್ಕ, ಅಶೋಕ್ ಶರ್ಮಾ, ರಶ್ಮಿ, ಸಿಂಧು ಷಣ್ಮುಗನ್, ಶ್ಯಾಮಾಬಾಯಿ , ಮೀನಾ, ಕರುಣಾ ಯಾದವ್, ರಿತು ರಾಜೊರಾ, ಸಣ್ಣಪಾಪಣ್ಣ ನಾಯಕ, ಉಪ ವಲಯ ಅರಣ್ಯಾಧಿಕಾರಿ ಅಶೋಕ್ ಬೆಳ್ಳುಂಡಗಿ, ನಿಸರ್ಗ ಕನ್ಸರ್ವೇಶನ್ ಟ್ರಸ್ಟ್ ಜಿ.ಎನ್.ಅರುಣ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net