ಹಸೆ ಕಲೆಗೆ ರಾಷ್ಟ್ರಮಟ್ಟದ ಮನ್ನಣೆ | Felicitation

ಸೊರಬ ತಾಲೂಕಿನ ಹೆಚ್ಚೆ ಗ್ರಾಮದ ಹಸೆ ಚಿತ್ತಾರ ಕಲಾವಿದ ವಿಶ್ವನಾಥ್ ಜಿ. ಇಕ್ಕೇರಿ ಅವರನ್ನು ದೀವರ ಬಳಗದಿಂದ ಸನ್ಮಾನಿಸಲಾಯಿತು. ವೈ.ಜಿ.ಪುಟ್ಟಸ್ವಾಮಿ, ರಾಜಪ್ಪ ಮಾಸ್ತರ್, ಎಂ.ಡಿ.ಉಮೇಶ್, ನಾಗೇಶ್ ಇತರರಿದ್ದರು.
ಸೊರಬ ತಾಲೂಕಿನ ಹೆಚ್ಚೆ ಗ್ರಾಮದ ಹಸೆ ಚಿತ್ತಾರ ಕಲಾವಿದ ವಿಶ್ವನಾಥ್ ಜಿ. ಇಕ್ಕೇರಿ ಅವರನ್ನು ದೀವರ ಬಳಗದಿಂದ ಸನ್ಮಾನಿಸಲಾಯಿತು. ವೈ.ಜಿ.ಪುಟ್ಟಸ್ವಾಮಿ, ರಾಜಪ್ಪ ಮಾಸ್ತರ್, ಎಂ.ಡಿ.ಉಮೇಶ್, ನಾಗೇಶ್ ಇತರರಿದ್ದರು.
Published on
ಸೊರಬ: ಹಸೆ ಚಿತ್ತಾರ ಕಲಾವಿದ ವಿಶ್ವನಾಥ್ ಜಿ. ಇಕ್ಕೇರಿ ಅವರು ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ದೀವರ ಹಸೆ ಚಿತ್ತಾರ ಕಲೆಯ ರಾಯಭಾರಿ ಆಗಿರುವುದು ನಮ್ಮ ಸಮುದಾಯ ಮಾತ್ರವಲ್ಲದೆ ತಾಲೂಕಿಗೆ ಹೆಮ್ಮೆಯ ವಿಚಾರ ಎಂದು ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ಉಪಾಧ್ಯಕ್ಷ ವೈ.ಜಿ.ಪುಟ್ಟಸ್ವಾಮಿ ಹೇಳಿದರು.
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮನಾಲಿಯಲ್ಲಿ ಆಯೋಜಿಸಿದ್ದ ಒಂದು ರಾಜ್ಯ ಒಂದು ಕಲಾವಿದ ಕಾರ್ಯಾಗಾರದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದ ತಾಲೂಕಿನ ಹೆಚ್ಚೆ ಗ್ರಾಮದ ಕಲಾವಿದ ವಿಶ್ವನಾಥ್ ಅವರನ್ನು ದೀವರ ಬಳಗದಿಂದ ಸನ್ಮಾನಿಸಿ ಮಾತನಾಡಿದರು.
ಶ್ರಮ ಸಂಸ್ಕೃತಿಯಿಂದ ಕೂಡಿದ ಹಳ್ಳಿಗಳಲ್ಲಿ ಸುಗ್ಗಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ತಮ್ಮಲ್ಲಿರುವ ಕಲೆಯನ್ನು  ಅನಾವರಣಗೊಳಿಸುತ್ತಿದ್ದರು. ಆದರೆ ಈಗಿನ ಕಾಲಘಟ್ಟದಲ್ಲಿ ಮಾಧ್ಯಮಗಳ ಮೂಲಕ ಸಾಮಾನ್ಯ ಜನರಲ್ಲಿರುವ ಅಮೋಘ ಪ್ರತಿಭೆಯು ಜಗತ್ತಿನಾದ್ಯಂತ ವಿಸ್ತಾರಗೊಳ್ಳುವ ಸುವರ್ಣ ಅವಕಾಶ ಲಭಿಸುತ್ತಿದೆ. ಅದೇ ರೀತಿ ತಾಲೂಕಿನ ಹಸೆ ಕಲಾವಿದ ವಿಶ್ವನಾಥ್ ಸಾಧನೆ ಮಾಡಿದ್ದಾರೆ ಎಂದರು.
ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ತಳ ಸಮುದಾಯದಿಂದ ಬಂದ ಹೆಚ್ಚೆ ಗ್ರಾಮದ ಗೋವಿಂದಪ್ಪ ಮತ್ತು ಕಾಳಮ್ಮ ದಂಪತಿಯ ಪುತ್ರ ವಿಶ್ವನಾಥ್ ಅವರು ತಾಯಿಯಿಂದ ಬಳುವಳಿಯಾಗಿ ಬಂದ ಹಸೆ ಚಿತ್ತಾರದ ಕಲೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಪುರಸಭೆ ಮಾಜಿ ಉಪಾಧ್ಯಕ್ಷ ಎಂ.ಡಿ.ಉಮೇಶ್, ಕಲಾವಿದ ವಿಶ್ವನಾಥ್ ಇಕ್ಕೇರಿ ಮಾತನಾಡಿದರು. ದೀವರ ಬಳಗದ ನಾಗೇಶ್, ಸಮಾಜ ಸೇವಕ ರಾಜು ಹಿರಿಯಾವಲಿ, ವಕೀಲ ಶಿವಕುಮಾರ್, ಶೇಖರಮ್ಮ, ಶಂಕರ, ಡಾ. ನೀಲೇಶ್, ಕೃಷ್ಣಮೂರ್ತಿ, ವೀರಭದ್ರ, ಶ್ರೀನಿವಾಸ್, ಸಣ್ಣಪ್ಪ, ಏಕಾಂತಪ್ಪ, ಪರಸಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net