ತೀರ್ಥಹಳ್ಳಿ ತಾಲೂಕಿನ ರಾಮನಸರ ನಾಗದೇವತೆ ಚೌಡೇಶ್ವರಿ ವರ್ಧಂತಿ ಉತ್ಸವ.
Published on:
Copied
Follow Us
ತೀರ್ಥಹಳ್ಳಿ: ಹುಂಚದಕಟ್ಟೆ ಸಮೀಪದ ಶ್ರೀೇತ್ರ ರಾಮನಸರ ನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಸನ್ನಿಧಿಯಲ್ಲಿ 20ನೇ ವರ್ಷದ ನಾಗದೇವತೆ ವರ್ಧಂತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ನಾಗದೇವತೆಗೆ ಕಲಾಹೋಮ, 108 ಕಳಶ ಅಭಿಷೇಕ, ಪವಮಾನ ಅಭಿಷೇಕ ಹಾಗೂ ಪರಿವಾರ ದೇವತೆಗಳಿಗೆ ಮಹಾಪೂಜೆ ನೆರವೇರಿಸಲಾಯಿತು. ರಾತ್ರಿ ನಾಗದೇವತೆಗೆ ಆಶ್ಲೇಷ ಬಲಿಪೂಜೆ, ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು.
ಮುರಳೀಧರ ಕೆದ್ಲಾಯ ಹೆಗ್ಡೆಕೆರೆ ಹಳ್ಳಾಡಿ ಹಾಗೂ ದೇವಸ್ಥಾನ ಪ್ರಧಾನ ಅರ್ಚಕ ಸುರೇಶ್ ಭಟ್ ನೇತೃತ್ವದಲ್ಲಿ ಪೂಜಾ ವಿಧಾನಗಳು ನೆರವೇರಿದವು. ವಿವಿಧ ಬಗೆಯ ಹಣ್ಣಿನಿಂದ ನಿರ್ಮಿಸಿದ್ದ ಪಲ್ಲಕ್ಕಿಯಲ್ಲಿ ಆಂಜನೇಯ ಸ್ವಾಮಿಯನ್ನು ಕೂರಿಸಿ 1001 ಬಾಳೆಹಣ್ಣು, ಜೇನುತುಪ್ಪ ಹೋಮ ಸೇರಿದಂತೆ ವಿವಿಧ ಪೂಜೆ ಸಲ್ಲಿಸಲಾಯಿತು.
ರಾತ್ರಿ 9.30ರಿಂದ ಬೆಳಗ್ಗೆ 6.30ರವರೆಗೆ ಚೌಡಮ್ಮ ದೇವಿ ಕೃಪಾಪೋಷಿತ ಯಗಾನ ಮಂಡಳಿಯಿಂದ ವಸಂತಗಾನ ಯಗಾನ ಪ್ರದರ್ಶನ ನಡೆಯಿತು. ದೇವಾಲಯ ಆಡಳಿತ ಮಂಡಳಿಯ ಸುನಂದಮ್ಮ, ಧರ್ಮದರ್ಶಿ ನಾಗರಾಜ್ ಹುಂಚದಕಟ್ಟೆ ಮತ್ತಿತರರಿದ್ದರು.