ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ರಾಘವೇಂದ್ರ ಭಟ್, ತಾಯಿ ಮತ್ತು ಶಿಶು ಇಬ್ಬರೂ ಐಸಿಯುನಲ್ಲಿ ತೀವ್ರ ಆರೋಗ್ಯ ಸವಾಲು ಎದುರಿಸಿದರು. ನಂತರ ತಾಯಿಗೆ ಕಾಣಿಸಿಕೊಂಡ ಮೆದುಳಿನ ತೊಂದರೆ(ಎನ್ಸೆಫಲೋಪತಿ)ಯನ್ನು ನರರೋಗ ತಜ್ಞೆ ಡಾ. ರೂಪಾ ಗುಣಪಡಿಸಿದರು. ಐಸಿಯುನಲ್ಲಿ ನಾಲ್ಕು ದಿನ ಇದ್ದು, ಬಳಿಕ ತಾಯಿಯನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಮೂರು ದಿನಗಳಲ್ಲಿ ದೃಷ್ಟಿ ಸುಧಾರಿಸಿದ್ದು ಮನೆಗೆ ಮರಳಿದರು ಎಂದರು.