ಮನೆಯಲ್ಲಿ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹ ಅವಶ್ಯ

ಸೊರಬದ ಚಂದ್ರಗುತ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಸುಧಾಕರ್ ಪಿ. ನಾಯ್ಕ ಉದ್ಘಾಟಿಸಿದರು. ಗಣೇಶ್ ಮರಡಿ, ಸರಿತಾ ಕೃಷ್ಣಪ್ಪ ಇತರರಿದ್ದರು.
ಸೊರಬದ ಚಂದ್ರಗುತ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಸುಧಾಕರ್ ಪಿ. ನಾಯ್ಕ ಉದ್ಘಾಟಿಸಿದರು. ಗಣೇಶ್ ಮರಡಿ, ಸರಿತಾ ಕೃಷ್ಣಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿ
  • ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ವಿದ್ಯಾರ್ಥಿಗಳಿಗೆ ತುಂಬ ಅಮೂಲ್ಯ
ಸೊರಬ: ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಮರಡಿ ಹೇಳಿದರು.
ಚಂದ್ರಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಚಂದ್ರಗುತ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ, ಸ್ಪರ್ಧೆ, ಕ್ರೀಡೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ವಿದ್ಯಾರ್ಥಿಗಳಿಗೆ ತುಂಬ ಅಮೂಲ್ಯ. ಶಿಕ್ಷಕರು ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವ ಜತೆಗೆ ಮಕ್ಕಳಿಗೆ ಮನೆಯಲ್ಲೂ ಸಹ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಚಂದ್ರಗುತ್ತಿ ಕ್ಲಸ್ಟರ್ ಮಟ್ಟದ 13 ಶಾಲೆ ವಿದ್ಯಾರ್ಥಿಗಳು ಜಾನಪದ ನೃತ್ಯ, ವೇಷಭೂಷಣ, ಸಂಗೀತ, ಮಣ್ಣಿನ ಮಾದರಿ, ಸ್ಪರ್ಧಾತ್ಮಕ ಚಟುವಟಿಕೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಸುಧಾಕರ್ ಪಿ. ನಾಯ್ಕ, ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಮುಖ್ಯಶಿಕ್ಷಕಿ ಮಮತಾ, ಪದವೀಧರ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಭೀಮರಾಜ್, ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ತಾಲೂಕು ಉಪಾಧ್ಯಕ್ಷೆ ಸುನಂದಾ, ಚನ್ನಪಟ್ಟಣ ಶಾಲೆ ಮುಖ್ಯಶಿಕ್ಷಕಿ ಗಿರಿಜಾ ವಾಸುದೇವ್, ಉರ್ದು ಶಾಲೆ ಮುಖ್ಯಶಿಕ್ಷಕ ಗೌಸ್ ಅಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net