ಅಡುಗೆ ನಿವೃತ್ತ ಸಹಾಯಕರಿಗೆ ಹೆಚ್ಚಿನ ನೆರವು | student hostel

ಸೊರಬದಲ್ಲಿ ವಿದ್ಯಾರ್ಥಿ ನಿಲಯ ಕಾಮಗಾರಿಗೆ ಭೂಮಿ ಪೂಜೆ, ಅಕ್ಷರ ದಾಸೋಹ ನಿವೃತ್ತ ಅಡುಗೆ ಸಹಾಯಕರಿಗೆ ಇಡುಗಂಟು ವಿತರಣೆ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಕೃಷ್ಣಮೂರ್ತಿ, ಪುರಂದರ,  ಶಶಿಧರ್, ಪುಷ್ಪಾ, ಶಶಿಕಲಾ ಇತರರಿದ್ದರು.
ಸೊರಬದಲ್ಲಿ ವಿದ್ಯಾರ್ಥಿ ನಿಲಯ ಕಾಮಗಾರಿಗೆ ಭೂಮಿ ಪೂಜೆ, ಅಕ್ಷರ ದಾಸೋಹ ನಿವೃತ್ತ ಅಡುಗೆ ಸಹಾಯಕರಿಗೆ ಇಡುಗಂಟು ವಿತರಣೆ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಕೃಷ್ಣಮೂರ್ತಿ, ಪುರಂದರ, ಶಶಿಧರ್, ಪುಷ್ಪಾ, ಶಶಿಕಲಾ ಇತರರಿದ್ದರು.
Published on
ಸೊರಬ: ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆಯು ನಿರೀಕ್ಷಿತ ಪ್ರಗತಿ ಸಾಧಿಸಲು ತಮ್ಮದೇ ಆದ ರೀತಿ ಶ್ರಮವಹಿಸುತ್ತಿರುವ ಅಡುಗೆ ಸಿಬ್ಬಂದಿ ಸೇವೆಯನ್ನು ಸರ್ಕಾರ ಗುರುತಿಸಿದೆ ಎಂದು ಶಿಕ್ಷಣ ಸಚಿವ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ 5.47 ಕೋಟಿ ರೂ. ವೆಚ್ಚದ ವಿದ್ಯಾರ್ಥಿ ನಿಲಯ ಕಾಮಗಾರಿಗೆ ಭೂಮಿ ಪೂಜೆ, ತಾಲೂಕಿನ ಚಿತ್ರಟ್ಟೆಹಳ್ಳಿ ವೃತ್ತದಲ್ಲಿ ಬಸ್ ನಿಲ್ದಾಣ, ಮೀನುಗಾರರಿಗೆ ತೆಪ್ಪ ವಿತರಣೆ, ಆನವಟ್ಟಿಯಲ್ಲಿ ಇಂದಿರಾ ಕ್ಯಾಂಟೀನ್ ಹಾಗೂ ಪಟ್ಟಣದಲ್ಲಿ ಅಕ್ಷರ ದಾಸೋಹ ನಿವೃತ್ತ ಅಡುಗೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಇಡುಗಂಟು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಡುಗೆ ಸಿಬ್ಬಂದಿಗೆ ಇದುವರೆಗೂ ಇಡಿಗಂಟು ಇರಲಿಲ್ಲ. ಈಗ 40 ಸಾವಿರ ರೂ. ಇಡುಗಂಟು ವಿತರಿಸಲಾಗುತ್ತಿದೆ. ಸಿಬ್ಬಂದಿ 75 ಸಾವಿರ ರೂ. ನೀಡಲು ಮನವಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಗೌರವ ಧನ ಹೆಚ್ಚಳದೊಂದಿಗೆ, ಈ ಬೇಡಿಕೆಯನ್ನೂ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಸರ್ಕಾರಿ ಶಾಲೆಗಳಲ್ಲಿ ಪ್ರತಿದಿನವೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಡುಗೆ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಸೇವೆಯನ್ನು ಸರ್ಕಾರ ಗೌರವದಿಂದ ಸ್ಮರಿಸುತ್ತಿದೆ. ಶಾಲೆಯಲ್ಲಿ ಕಲಿಕೆಯ ವಾತಾವರಣ ಉತ್ತಮವಾಗಿರಲು ಅಡುಗೆ ಸಹಾಯಕಿಯರ ಪಾತ್ರವೂ ಮುಖ್ಯವಾಗಿದೆ ಎಂದು ತಿಳಿಸಿದರು.
ಜಿಪಂ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ, ತಹಸೀಲ್ದಾರ್ ಪುರಂದರ, ಇಒ ಶಶಿಧರ್, ಬಿಇಒ ಪುಷ್ಪಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲಗೌಡ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಮುಖಂಡರಾದ ಗಣಪತಿ ಹುಲ್ತಿಕೊಪ್ಪ, ಅಣ್ಣಪ್ಪ, ಸದಾನಂದಗೌಡ,  ಪ್ರಕಾಶ್, ಶಶಿಕಲಾ, ಮಂಜುನಾಥ್, ಗಣಪತಿ, ಬಸವೇಶ್ವರ, ಯಶೋದಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಶ್ರೀಕಾಂತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net