ಜನರ ಸಮಸ್ಯೆಗೆ ಸ್ಪಂದಿಸದೆ ಶಾಸಕರಿಂದ ಕಾಲಹರಣ

ರಾಜು ತಲ್ಲೂರು
ರಾಜು ತಲ್ಲೂರು
Published on

ಪ್ರಮುಖ ಮುಖ್ಯಾಂಶಗಳು

  • ಮಡಿವಾಳ ಮಾಚೀದೇವ ನಿಗಮದ ಮಾಜಿ ಅಧ್ಯಕ್ಷ ರಾಜು ತಲ್ಲೂರು ಟೀಕೆ
  • ಶಾಸಕ ಮಧು ಬಂಗಾರಪ್ಪ ಅವರು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
ಸೊರಬ: ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದ್ದರೂ ೇತ್ರದ ಶಾಸಕ ಮಧು ಬಂಗಾರಪ್ಪ ಸಚಿವರಾಗುವ ಭ್ರಮೆಯಲ್ಲಿ ಅಭಿವೃದ್ಧಿ ಮರೆತು ಬೆಂಗಳೂರಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ, ಮಡಿವಾಳ ಮಾಚೀದೇವ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ. ತಲ್ಲೂರು ಟೀಕಿಸಿದರು.
ಕಳೆದ ಮೂರು ವರ್ಷಗಳಿಂದ ೇತ್ರದಲ್ಲಿ ಕಾಣಿಸಿಕೊಳ್ಳದ ಶಾಸಕ ಮಧು ಬಂಗಾರಪ್ಪ ಅವರು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ತಾಲೂಕನ್ನು ಅಭಿವೃದ್ಧಿಪಡಿಸುತ್ತಾರೆ ಎಂದು ಜನರು ವಿಶ್ವಾಸವಿಟ್ಟು ಗೆಲ್ಲಿಸಿದ್ದರು. ಸಚಿವರಾದ ಮಧು ಬಂಗಾರಪ್ಪ ೇತ್ರವನ್ನು ಮರೆತಿದ್ದಾರೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಅಸಮರ್ಥ ಶಿಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲಾಗದ ಸಚಿವ ನಮ್ಮ ೇತ್ರದಿಂದ ಆಯ್ಕೆಯಾಗಿದ್ದು ತಾಲೂಕಿನ ದುರ್ದೈವ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 295 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಮೂಡಿ, ಮೂಗೂರು ಏತ ನೀರಾವರಿ ಯೋಜನೆ ಮಾಡಲಾಗಿದೆ. ಅಸಮರ್ಪಕ ವಿದ್ಯುತ್​ ಪೂರೈಕೆಯಿಂದ ರೈತರಿಗೆ ಬೆಳೆ ಬೆಳೆಯಲಾಗುತ್ತಿಲ್ಲ ಎಂದರು. 
ಬಿಜೆಪಿ ತಾಲೂಕು ಟಕದ ಅಧ್ಯ ಪ್ರಕಾಶ್​ ಅಗಸನಹಳ್ಳಿ, ಪ್ರಧಾನ ಕಾರ್ಯದರ್ಶಿ ಸುರೇಶ್​ ಉದ್ರಿ, ದಿಶಾ ಸಮಿತಿ ಸದಸ್ಯ ದೇವೇಂದ್ರಪ್ಪ, ಪ್ರಮುಖರಾದ ಮಲ್ಲಿಕಾರ್ಜುನ, ಶಿವಕುಮಾರ್​ ಕಡಸೂರು, ನಿರಂಜನ್​, ಈಶ್ವರಪ್ಪ, ಗಜಾನನ ರಾವ್​, ವಿನಾಯಕ, ವಿನಯ್​ ಶೆರ್ವಿ, ಕೇಶವ ಪೇಟ್ಕರ್​ ಇದ್ದರು.
ೇತ್ರಕ್ಕೆ ಶಾಸಕರ ಅನುದಾನದಲ್ಲಿ ಇಲ್ಲಿಯವರೆಗೆ ಎಷ್ಟು ಖರ್ಚು ಮಾಡಿದ್ದೀರಿ. ಸರ್ಕಾರದಿಂದ ಎಷ್ಟು ವಿಶೇಷ ಅನುದಾನ ತಂದಿದ್ದೀರಿ. ತಾಲೂಕಿನಲ್ಲಿ ಎಷ್ಟು ಕಾರ್ಯಕ್ರಮ ಅನುಷ್ಠಾನ ಮಾಡಿದ್ದೀರಿ ಎಂಬುದನ್ನು ಶಾಸಕರು ಬಹಿರಂಗಪಡಿಸಬೇಕು. ಜನರ ಜತೆಗೆ ಇರುವುದನ್ನು ಬಿಟ್ಟು ಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಅಧಿಕಾರಿಗಳ ಜತೆ ವರ್ಚುವಲ್​ ಮೀಟಿಂಗ್​ ಮಾಡ್ತಿದರೆ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವೇ?
> ರಾಜು ಎಂ. ತಲ್ಲೂರು, ಮಡಿವಾಳ ಮಾಚೀದೇವ ನಿಗಮದ ಮಾಜಿ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net