ಮಿಶ್ರ ಬೆಳೆ ಲಾಭದಾಯಕ | workshop

ಆನಂದಪುರ ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ. ಜಿ.ಕೆ.ಗಿರಿಜೇಶ್, ಡಾ. ಸ್ವಾತಿ, ಡಾ. ಕಿರಣ್‌ಕುಮಾರ್, ಡಾ. ಕೃಷ್ಣ ರೆಡ್ಡಿ ಇತರರಿದ್ದರು.
ಆನಂದಪುರ ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ. ಜಿ.ಕೆ.ಗಿರಿಜೇಶ್, ಡಾ. ಸ್ವಾತಿ, ಡಾ. ಕಿರಣ್‌ಕುಮಾರ್, ಡಾ. ಕೃಷ್ಣ ರೆಡ್ಡಿ ಇತರರಿದ್ದರು.
Published on
ಆನಂದಪುರ: ಅಡಕೆ ತೋಟದ ನಡುವೆ ಉಪ ಬೆಳೆ ಕೃಷಿ ಕೈಗೊಂಡರೆ ಇನ್ನಷ್ಟು ಲಾಭ ಗಳಿಸಬಹುದು ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಜಿ.ಕೆ.ಗಿರಿಜೇಶ್ ತಿಳಿಸಿದರು.
ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಅಡಕೆಯಲ್ಲಿ ಸಮಗ್ರ ಕೃಷಿ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಅಡಕೆ ಕೃಷಿ ಮಾಡುವ ಬದಲು ಇಂದಿನ ದಿನಗಳಲ್ಲಿ ಸಮಗ್ರ ಕೃಷಿ ಕೈಗೊಳ್ಳುವ ಅಗತ್ಯವಿದೆ ಎಂದರು.
ಅಡಕೆ ಮರಗಳ ನಡುವೆ ಉಪ ಬೆಳೆಗಳನ್ನು ಬೆಳೆದರೆ ಸಸ್ಯಗಳಿಂದ ಬಿಡುಗಡೆಯಾಗುವ ನೈಟ್ರೋಜನ್ ಮತ್ತಿತರ ಸಾರಗಳು ಅಡಕೆ ಮರದ ಬೇರುಗಳಿಗೆ ಬಲ ನೀಡುತ್ತವೆ. ಅಡಕೆಗೆ ಅಗತ್ಯ ಪೋಷಕಾಂಶ ನೀಡುತ್ತವೆ. ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಾರ್ಯಕ್ಕೆ ಇವು ಸಹಕಾರಿ ಎಂದರು.
ವಿಷಯ ತಜ್ಞರಾದ ಡಾ. ಸ್ವಾತಿ, ಡಾ. ಕಿರಣ್‌ಕುಮಾರ್, ಡಾ. ಕೃಷ್ಣ ರೆಡ್ಡಿ, ಡಾ. ರಾಮಕೃಷ್ಣ ಹೆಗಡೆ ಮತ್ತಿತರರು ಅಡಕೆ ಕೃಷಿ ಪದ್ಧತಿಗಳು, ರೋಗ ಮತ್ತು ಕೀಟ ನಿರ್ವಹಣೆ ಮಾಹಿತಿ ನೀಡಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net