ಕೇರಳ ಕಾಂಗ್ರೆಸ್‌ನ ವಿವಿಧ ಹಂತಗಳಲ್ಲಿ ಜವಾಬ್ದಾರಿ ನಿರ್ವಹಿಸಿರುವ ವಿಷ್ಣುನಾಥ್, ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ಎಐಸಿಸಿ ಕಾರ್ಯದರ್ಶಿಯಾಗಿದ್ದ ಅವರಿಗೆ ಕೆಲ ಸಮಯ ಕರ್ನಾಟಕದ ಜವಾಬ್ದಾರಿಯನ್ನೂ ನೀಡಲಾಗಿತ್ತು. ಕೆಎಸ್‌ಯು (ಕೇರಳ ಸ್ಟೂಡೆಂಟ್ಸ್ ಯೂನಿಯನ್), ಕೇರಳ ವಿವಿ ಸೆನೆಟ್, ಕೇರಳ ಪ್ರದೇಶ ಕಾಂಗ್ರೆಸ್‌ನಲ್ಲಿ ಮಹತ್ತರ ಹುದ್ದೆಗಳನ್ನು ಈಗಾಗಲೇ ನಿರ್ವಹಿಸಿದ್ದಾರೆ. ಇದೀಗ ಸಚಿವರಾಗಿ ಗಮನ ಸೆಳೆದಿದ್ದಾರೆ.