ದೇವರ ನಾಮಸ್ಮರಣೆಯಿಂದ ಮಾನಸಿಕ ನೆಮ್ಮದಿ | Silver Jubilee
ಸಾಗರ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಏರ್ಪಡಿಸಿದ್ದ ಮನೆಮನೆ ಭಜನೆ ಕಾರ್ಯಕ್ರಮದಲ್ಲಿ ಅಶ್ವಿನಿಕುಮಾರ್, ಡಿ.ಕೆ.ಸರೋಜಾ, ಮ.ಸ.ನಂಜುಂಡಸ್ವಾಮಿ, ವಿದ್ಯಾ ಸದಾಶಿವ ಜೋಯಿಸ್, ಆರತಿ ಅರವಿಂದ ಇತರರಿದ್ದರು.
Published on:
Copied
Follow Us
ಸಾಗರ: ದೇವರ ನಾಮಗಳನ್ನು ಪಠಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ನಮ್ಮ ಪುರಾಣ ಕಾಲದಿಂದಲೂ ಭಜನೆ ಸಾಂಪ್ರದಾಯಿಕವಾಗಿ ಬೆಳೆದು ಬಂದಿದೆ ಎಂದು ಶೃಂಗೇರಿ ಶಂಕರಮಠ ಸಾಗರ ಶಾಖೆ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಗಾಯತ್ರಿ ಮಹಿಳಾ ಮಂಡಳಿಯ ಬೆಳ್ಳಿಹಬ್ಬ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಮನೆಮನೆ ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ಎಷ್ಟೇ ಆಧುನಿಕತೆಗೆ ತೆರೆದುಕೊಂಡರೂ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಭಾರತೀಯ ಪರಂಪರೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಒತ್ತಡದ ಜೀವನದ ನಡುವೆ ನಮ್ಮ ಅನೇಕ ಆಚರಣೆಗಳಿಗೆ ನಾವು ವಿದಾಯ ಹೇಳಿದ್ದೇವೆ. ಆದರೂ ಭಜನೆಯಂತಹ ಸಂಸ್ಕೃತಿ ಇಂದಿಗೂ ಉಳಿದುಕೊಂಡಿದೆ. ಭಜನೆಯಿಂದ ದೇವರ ಪ್ರಾರ್ಥನೆ ಜತೆಗೆ ಮನಸ್ಸಿಗೂ ನೆಮ್ಮದಿ ಸಿಗುತ್ತದೆ ಎಂದರು.
ಸಾಮಾಜಿಕ ಕಾರ್ಯಕರ್ತ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಗಾಯತ್ರಿ ಮಹಿಳಾ ಮಂಡಳಿ 25 ವರ್ಷ ಪೂರೈಸಿದೆ. ಅಧಿಕ ಮಾಸದ ಅಂಗವಾಗಿ ಮನೆಮನೆಗೆ ಭಜನೆ ಕಾರ್ಯಕ್ರಮ ತೆಗೆದುಕೊಂಡು ಹೋಗುವ ಮೂಲಕ ಜನಮಾನಸದಲ್ಲಿ ಬಿತ್ತುವ ಸಾರ್ಥಕ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸಂಘದ ನಿಕಟಪೂರ್ವ ಅಧ್ಯಕ್ಷೆ ಡಿ.ಕೆ.ಸರೋಜಾ ಮಾತನಾಡಿ, ಗಾಯತ್ರಿ ಮಹಿಳಾ ಮಂಡಳಿ ಎಲ್ಲರ ಸಹಕಾರದಿಂದ 25 ವರ್ಷ ಪೂರೈಸಿದೆ. ಮಹಿಳೆಯರಿಗೆ ಭಜನೆ ತರಬೇತಿ, ಸ್ಪರ್ಧೆ, ಅಧ್ಯಯನ ಪ್ರವಾಸ, ನವರಾತ್ರಿ ಸಂದರ್ಭದಲ್ಲಿ ಗೊಂಬೆ ಪ್ರದರ್ಶನ ಸೇರಿ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಮಹಿಳಾ ಮಂಡಳಿ ಅಧ್ಯಕ್ಷೆ ವಿದ್ಯಾ ಸದಾಶಿವ ಜೋಯಿಸ್, ಜ್ಯೋತಿ ನಂಜುಂಡಸ್ವಾಮಿ, ಆರತಿ ಅರವಿಂದ, ವೃಂದಾ ಜೋಯಿಸ್, ಮಂಜರಿ ಬಾಪಟ್, ಭಾರತಿ ಸ್ವಾಮಿ, ಗಾಯತ್ರಿ ದೀಕ್ಷಿತ್, ಜ್ಯೋತಿ ಮಣೂರು, ಸುಜಾತಾ ಇತರರಿದ್ದರು.