ಮಾಯಣ್ಣಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಿ | Appeal

ಕಾರ್ಮಿಕ ಮುಖಂಡರಾಗಿದ್ದ ಕಾಮ್ರೇಡ್ ಡಿ.ಸಿ.ಮಾಯಣ್ಣ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಮುಖರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಆರ್.ಕರುಣಾಮೂರ್ತಿ, ಬಿ.ಎನ್.ರಾಜು, ಸಿದ್ದಲಿಂಗಯ್ಯ, ಲಕ್ಷ್ಮೀದೇವಿ, ನೀಲಮ್ಮ ಇತರರಿದ್ದರು.
ಕಾರ್ಮಿಕ ಮುಖಂಡರಾಗಿದ್ದ ಕಾಮ್ರೇಡ್ ಡಿ.ಸಿ.ಮಾಯಣ್ಣ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಮುಖರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಆರ್.ಕರುಣಾಮೂರ್ತಿ, ಬಿ.ಎನ್.ರಾಜು, ಸಿದ್ದಲಿಂಗಯ್ಯ, ಲಕ್ಷ್ಮೀದೇವಿ, ನೀಲಮ್ಮ ಇತರರಿದ್ದರು.
Published on
ಭದ್ರಾವತಿ: ನಗರದ ಕಾರ್ಮಿಕ ಮುಖಂಡ, ಹೋರಾಟಗಾರ ದಿ. ಡಿ.ಸಿ.ಮಾಯಣ್ಣ ಅವರ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಮತ್ತು ಕೇಂದ್ರ ಸರ್ಕಾರ ಪ್ರದ್ಮಶ್ರೀ ಪ್ರಶಸ್ತಿಗಳನ್ನು ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಮುಖರು ಉಪ ತಹಸೀಲ್ದಾರ್ ಮಂಜಾನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಜೀವಿತಾವಧಿಯಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಕಾಯಂ ಕಾರ್ಮಿಕ ಹಾಗೂ ಗುತ್ತಿಗೆ ಕಾರ್ಮಿಕರ ಪರವಾಗಿ ನಿರಂತರ ಹೋರಾಟ ನಡೆಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ, ಅಸಂಘಟಿತ ಕೂಲಿ ಕಾರ್ಮಿಕರ ಪರವಾಗಿ, ಪ್ರಗತಿಪರ ಸಂಘಟನೆಗಳ ಬಹುತೇಕ ಹೋರಾಟಗಳಲ್ಲೂ ತೊಡಗಿಸಿಕೊಂಡಿದ್ದರು. ಯಾವುದೇ ಲಾಪೇಕ್ಷೆ ಇಲ್ಲದೆ ಅತ್ಯಂತ ಗೌರವದಿಂದ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.
ನಗರಸಭೆಯಿಂದ ಬೊಮ್ಮನಕಟ್ಟೆ ಆಶ್ರಯ ಯೋಜನೆಯಡಿ ನಿರ್ಮಿಸುತ್ತಿರುವ ಜಿ+3 ಗುಂಪು ಮನೆಗಳಿಗೆ ಡಿ.ಸಿ.ಮಾಯಣ್ಣ ಬಡಾವಣೆ’ ಎಂದು ಹಾಗೂ ನಗರದ ಮುಖ್ಯ ರಸ್ತೆ ಮತ್ತು ಮುಖ್ಯ ವೃತ್ತಗಳಿಗೆ ಅವರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಕಾಮ್ರೇಡ್ ಡಿ.ಸಿ ಮಾಯಣ್ಣ ಅವರು ಕಣ್ಣುಗಳನ್ನು, ಕಾಮ್ರೇಡ್ ಎಚ್.ವಿ.ಅನಂತಸುಬ್ಬರಾವ್ ಅವರು ತಮ್ಮ ದೇಹ ದಾನ ಮಾಡಿದ್ದಾರೆ. ಕಾಮ್ರೇಡ್ ಕಾಳೇಗೌಡ, ಕಾಮ್ರೇಡ್ ಎಸ್.ಆಂಜನೇಯ, ನಗರಸಭೆ ಮಾಜಿ ಸದಸ್ಯ ಕೆ.ಎನ್.ಭೈರಪ್ಪ ಗೌಡ ಇತ್ತೀಚೆಗೆ ನಿಧನರಾಗಿದ್ದಾರೆ. ಕಾರ್ಮಿಕರ ಪರ ಇವರು ನಡೆಸಿದ ಹೋರಾಟ ಗಮನಿಸಿ ಮುಖ್ಯಮಂತ್ರಿಗಳು ‘ಕಾರ್ಮಿಕ ರತ್ನ’ ಎಂಬ ಪ್ರಶಸ್ತಿಯನ್ನು ಜಾರಿಗೆ ತಂದು ನಿಧನರಾದ ಕಾರ್ಮಿಕ ಮುಖಂಡರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಆರ್.ಕರುಣಾಮೂರ್ತಿ, ಬಿ.ಎನ್.ರಾಜು, ಸಿದ್ದಲಿಂಗಯ್ಯ, ಟಿ.ಜಿ ಬಸವರಾಜಯ್ಯ, ಶಿವಕುಮಾರ್, ದೊರೈ, ಯಲ್ಲೋಜಿ ರಾವ್, ಹನುಮಮ್ಮ, ಡಿ.ರಾಜು, ವೈ.ಶಶಿಕುಮಾರ್, ಅರುಣ್‌ಕುಮಾರ್, ಸೋಮಣ್ಣ, ಎಂ.ವಿ.ಚಂದ್ರಶೇಖರ್, ಬ್ರಹ್ಮಲಿಂಗಯ್ಯ, ಲಕ್ಷ್ಮೀದೇವಿ, ನೀಲಮ್ಮ, ಜಯಮ್ಮ, ವಿನ್ನಿ ಡಿಸೋಜ, ಮೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net