ಬಿಡುಗಡೆಯಾದ ಅನುದಾನ ಸದ್ಬಳಕೆ ಆಗಲಿ | Jamabandi meeting

ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜಮಾಬಂದಿ ಸಭೆಯಕ್ಕಿ ಎಂ.ಕಿರಣ್‌ಕುಮಾರ್, ಕೆ.ಆರ್.ಸುಜಾತಾ, ಆರ್.ಶಶಿಧರ್, ಶ್ರೀರಾಮ್ ಇದ್ದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜಮಾಬಂದಿ ಸಭೆಯಕ್ಕಿ ಎಂ.ಕಿರಣ್‌ಕುಮಾರ್, ಕೆ.ಆರ್.ಸುಜಾತಾ, ಆರ್.ಶಶಿಧರ್, ಶ್ರೀರಾಮ್ ಇದ್ದರು.
Published on
ಸೊರಬ: ಪ್ರತಿ ವರ್ಷ ಬಿಡುಗಡೆಯಾದ ಅನುದಾನವನ್ನು ಇಲಾಖೆಗಳು ಕಡ್ಡಾಯವಾಗಿ ಖರ್ಚು ಮಾಡಬೇಕು. ಲ್ಯಾಪ್ಸ್ ಆದರೆ ಅಭಿವೃದ್ಧಿ ಕುಂಟಿತವಾಗುತ್ತದೆ ಎಂದು ಸೊರಬ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಂ.ಕಿರಣ್‌ಕುಮಾರ್ ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜಮಾಬಂದಿ ಸಭೆಯಲ್ಲಿ ಮಾತನಾಡಿದ ಅವರು, ತಾಪಂನಿಂದ ಬಿಡುಗಡೆಯಾದ ಶೇ.60ರಷ್ಟು ಅನುದಾನ ವೇತನಕ್ಕೆ ನೀಡುತ್ತಿದ್ದು, ಇದರಲ್ಲಿ ಗೌರವ ಧನ, ಅತಿಥಿ ಉಪನ್ಯಾಸಕರ ವೇತನ, ಸಹಾಯಧನ, ದಿನಗೂಲಿ ನೌಕರರ ವೇತನ, ವಿದ್ಯಾರ್ಥಿ ವೇತನ ಇನ್ನಿತರೆ ವಸತಿ ಹಾಗೂ ಭೋಜನಾ ವೆಚ್ಚಗಳನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ನೀಡಬೇಕು ಎಂದರು.
ತಾಪಂ ಹಾಗೂ ಆಡಳಿತ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಯಲ್ಲಿ ಹಂಚಿಕೆ ಮಾಡಲಾದ ಯೋಜನೆ, ಯೋಜನೇತರ ಅನುದಾನವನ್ನು ಸರಿಯಾದ ಸಮಯಕ್ಕೆ ಬಳಸಬೇಕು. ಕ್ರಿಯಾ ಯೋಜನೆ ಮತ್ತು ಬಿಡುಗಡೆಯಾದ ಹಣಕ್ಕೆ ಸರಿಯಾಗಿ ವೆಚ್ಚಗಳನ್ನು ನಿಗದಿ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಶೇ.99 ಅಧಿಕ ಸರ್ಕಾರದ ಅನುದಾನ ಬಳಕೆಯಾಗಿರುವುದು ಉತ್ತಮ ಸಂಗತಿ ಎಂದು ಹೇಳಿದರು.
ಜಮಾಬಂದಿ ಅಧಿಕಾರಿ ಕೆ.ಆರ್.ಸುಜಾತಾ ಮಾತನಾಡಿ, ಅಧಿಕಾರಿಗಳು ಜಮಾಬಂದಿ ಲೆಕ್ಕಗಳನ್ನು ಸರಿಯಾಗಿ ಮಂಡಿಸಬೇಕು ಮತ್ತು ಅವುಗಳಲ್ಲಿ ಪೂರ್ಣ ಮಾಹಿತಿ ಒಳಗೊಂಡಿರಬೇಕು. ಖರ್ಚುಗಳ ಬಗ್ಗೆ ಸೂಕ್ಷ್ಮ ಹಾಗೂ ಪಾರದರ್ಶಕ ಲೆಕ್ಕಗಳನ್ನು ಇಡಬೇಕು. ತಾಪಂನಿಂದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ, ಪಶು ಸಂಗೋಪನೆ ಮೊದಲಾದ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಗಳನ್ನು ಪೂರ್ಣ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿಗೆ 144 ಕೋಟಿ ರೂ. ಅನುದಾನ ತಾಲೂಕು ಪಂಚಾಯಿತಿ ವ್ಯಾಪ್ತಿಯ ಇಲಾಖೆಗಳಿಗೆ ಬಿಡುಗಡೆಯಾಗಿದೆ. ಇದರಲ್ಲಿ 132 ಕೋಟಿ ರೂ. ಅನುದಾನ ಬಳಕೆಯಾಗಿದೆ. ಉಳಿದ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಬಳಸಿಕೊಳ್ಳುವಂತೆ ಸೂಚಿಸಿದರು.
ತಾಪಂ ಇಒ ಆರ್.ಶಶಿಧರ್, ಪಂಚಾಯತ್‌ರಾಜ್ ಇಲಾಖೆ ಸಹಾಯಕ ನಿರ್ದೇಶಕ ಶ್ರೀರಾಮ್, ಹಿರಿಯ ಅಧಿಕಾರಿಗಳಾದ ಡಾ. ಪ್ರದೀಪ್‌ಕುಮಾರ್, ಕೆ.ಜಿ.ಕುಮಾರ್, ಇಕ್ಬಾಲ್ ಜಾತಿಗರ್, ಸೋಮಶೇಖರ್, ಆರ್.ಪುಷ್ಪಾ , ಮಂಜುನಾಥ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net