ಮಕ್ಕಳ ಕಲಿಕೆ ಹಬ್ಬ ಸಂಭ್ರಮ ಆಗಲಿ

ಸಾಗರದ ಆರ್‌ಎಂಎಸ್ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಕಲಿಕಾ ಹಬ್ಬದಲ್ಲಿ ಡಾ. ಅನ್ನಪೂರ್ಣಾ, ಭೂಮೇಶ್, ದತ್ತಾತ್ರೇಯ ಭಟ್, ರಮೇಶ್ ಇತರರಿದ್ದರು.
ಸಾಗರದ ಆರ್‌ಎಂಎಸ್ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಕಲಿಕಾ ಹಬ್ಬದಲ್ಲಿ ಡಾ. ಅನ್ನಪೂರ್ಣಾ, ಭೂಮೇಶ್, ದತ್ತಾತ್ರೇಯ ಭಟ್, ರಮೇಶ್ ಇತರರಿದ್ದರು.
Published on
ಸಾಗರ: ಮಕ್ಕಳ ಕಲಿಕೆ ಹಬ್ಬದಂತೆ ಸಂಭ್ರಮದಿಂದ ಕೂಡಿರಬೇಕು. ಮಕ್ಕಳು ನಲಿಯುತ್ತ ಕಲಿತಾಗ ಕಲಿಕೆ ಸಾರ್ಥಕವಾಗುತ್ತದೆ ಎಂದು ಸಮನ್ವಯಾಧಿಕಾರಿ ಡಾ. ಅನ್ನಪೂರ್ಣ ಹೇಳಿದರು
ಸಾಗರದ ಆರ್‌ಎಂಎಸ್ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಬುಧವಾರ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಲಿಕಾ ಹಬ್ಬದ ಮೂಲಕ ಅವರನ್ನು ಉತ್ತೇಜಿಸಲಾಗುತ್ತಿದೆ. ಶಿಕ್ಷಕರು ಮಕ್ಕಳಿಗೆ ಅಕ್ಷರಜ್ಞಾನ ಕಲಿಸುವ ಜತೆಗೆ ಅವರು ಸತ್ಪಜೆಗಳಾಗಿ ರೂಪುಗೊಳ್ಳುವ ಅರಿವು ಮೂಡಿಸಬೇಕು. ಸೃಜನಶೀಲವಾಗಿ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಇಂತಹ ಕಲಿಕಾ ಹಬ್ಬ ಪ್ರೇರಣೆಯಾಗಿದೆ ಎಂದರು
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್ ಮಾತನಾಡಿ, ಮಕ್ಕಳ ಮನಸ್ಸು ಹೂವಿನಂತೆ ಇರುತ್ತದೆ. ಅವರ ಮನಸ್ಸು ಅರ್ಥ ಮಾಡಿಕೊಂಡು ಕಲಿಸುವ ಕೆಲಸವಾಗಬೇಕು. ಶಿಕ್ಷಣ ಇಲಾಖೆ ಮಕ್ಕಳ ಕಲಿಕೆಗೆ ಪ್ರೋತ್ಸಾಹದಾಯಕವಾದ ಚಟುವಟಿಕೆಗಳನ್ನು ರೂಪಿಸಿದೆ. ಶಿಕ್ಷಣದ ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಇಲಾಖೆಯ ಗುರಿಯಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ದತ್ತಾತ್ರೇಯ ಭಟ್, ರಮೇಶ್, ಝಾಕೀರ್, ದಸ್ತಗೀರ್, ಸಾಧಿಕ್, ತಬರೇಜ್ ಅಹ್ಮದ್, ಮಂಜುಳಾ, ಝುಲ್ಪಿಯಾ ಆಶಿಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net