ಸಾಹಿತ್ಯ ಅಧ್ಯಯನದ ಆಸಕ್ತಿ ಹೆಚ್ಚಾಗಲಿ

ಶಿರಾಳಕೊಪ್ಪದ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪತ್ರಕರ್ತ ದೀಪಕ್ ಸಾಗರ್ ಉದ್ಘಾಟಿಸಿದರು. ನಾಗರತ್ನಾ, ಜಯಪ್ಪ, ಎಂ.ನವೀನ್‌ಕುಮಾರ್ ಇತರರಿದ್ದರು.
ಶಿರಾಳಕೊಪ್ಪದ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪತ್ರಕರ್ತ ದೀಪಕ್ ಸಾಗರ್ ಉದ್ಘಾಟಿಸಿದರು. ನಾಗರತ್ನಾ, ಜಯಪ್ಪ, ಎಂ.ನವೀನ್‌ಕುಮಾರ್ ಇತರರಿದ್ದರು.
Published on
ಶಿರಾಳಕೊಪ್ಪ: ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಕಾವ್ಯದ ಓದಿನಿಂದ ದೂರ ಸರಿಯುತ್ತಿರುವುದು ಕಳವಳಕಾರಿ ಸಂಗತಿ ಎಂದು ಹಿರಿಯ ಪತ್ರಕರ್ತ ದೀಪಕ್ ಸಾಗರ್ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶಿರಾಳಕೊಪ್ಪದ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂಜಿನಿಯರಿಂಗ್, ತಾಂತ್ರಿಕ ಶಿಕ್ಷಣ ಪಡೆಯುವ ಯುವಜನರು ನಮಗೂ ಸಾಹಿತ್ಯಕ್ಕೂ ಸಂಬಂಧವಿಲ್ಲ ಎನ್ನುವ ಕಲ್ಪನೆಯಲ್ಲಿದ್ದಾರೆ. ಕಾವ್ಯ ಓದಿದಾಗ, ಸಂಗೀತ ಆಲಿಸಿದಾಗ ಆಗುವ ಆನಂದ ಅಥವಾ ದುಃಖ ಕೂಡ ಒಂದು ಉತ್ತಮ ಭಾವನೆಯಾಗಿದೆ. ಸಾಹಿತ್ಯದ ಓದಿನಿಂದ ಮಾತ್ರ ಬರವಣಿಗೆ ಕಾವ್ಯಾತ್ಮಕ ಹಾಗೂ ಜಗತ್ತಿನಲ್ಲಿ ಶ್ರೇಷ್ಠ ಎನಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಶಿಕಾರಿಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ನವೀನ್‌ಕುಮಾರ್ ಮಾತನಾಡಿ, ಶಿಕ್ಷಣ ಮತ್ತು ಬದುಕು ಯಾಂತ್ರಿಕವಾಗುತ್ತಿರುವ ಇಂತಹ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಜೀವನದ ಬಗ್ಗೆ ಅರಿವು ಮೂಡಿಸಬೇಕು. ಸಾಹಿತ್ಯದ ಓದಿನಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು ಎಂದು ಹೇಳಿದರು.
ಪಾಲಿಟೆಕ್ನಿಕ್‌ನ ಕುಲಸಚಿವೆ ನಾಗರತ್ನಾ, ಪ್ರಾಚಾರ್ಯ ಜಯಪ್ಪ, ಕಾರ್ಯಕ್ರಮ ಆಯೋಜಕಿ ಲತಾ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹುಚ್ರಾಯಪ್ಪ, ಮೆರ್ಲಿನ್, ತಾಜುನ್ನಿಸಾ, ಗೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net