16ರಂದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಬೃಹತ್ ಜಾಥಾ | Sharavathi Pumped Storage

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮಘಟ್ಟಕ್ಕೆ ಮಾರಕ ಯೋಜನೆ ಕೈಬಿಡುವಂತೆ ಸಂಘಟನೆಗಳ ಒತ್ತಾಯ
  • ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕ ಮತ್ತು ಅವೈಜ್ಞಾನಿಕ
  • ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಹೇಳಿಕೆ
ಶಿವಮೊಗ್ಗ: ಪಶ್ಚಿಮ ಘಟ್ಟಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್(Sharavathi Pumped Storage) ಯೋಜನೆ ಕೈಬಿಡುವಂತೆ ಶಿವಮೊಗ್ಗ ರಾಷ್ಟ್ರಭಕ್ತರ ಬಳಗ ಏ.16ರಂದು ನಗರದಲ್ಲಿ ಹಮ್ಮಿಕೊಂಡಿರುವ ಬೃಹತ್ ಜಾಥಾಗೆ ಜಿಲ್ಲಾ ಕೈಗಾರಿಕಾ ಸಂಘ, ಅಣ್ಣಾ ಹಜಾರೆ ಹೋರಾಟ ಸಮಿತಿ ಒಳಗೊಂಡಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್(Jois Ramachar) ಹೇಳಿದರು.
ಯೋಜನೆ ಪರಿಸರಕ್ಕೆ ಮಾರಕವಾಗಿದ್ದು, ಅವೈಜ್ಞಾನಿಕವಾಗಿದೆ. ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ನಾಶಗೊಳ್ಳಲಿದೆ. 16 ಸಾವಿರಕ್ಕೂ ಅಧಿಕ ಮರಗಳು ಕಡಿತಲೆ ಆಗಲಿವೆ. ಇದರಿಂದ ಸಿಂಗಳಿಕ ವಿನಾಶದಂಚಿಗೆ ತಲುಪಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಯೋಜನೆಯಲ್ಲಿ ಸುರಂಗ ಮಾರ್ಗ(Tunnel)ವನ್ನು ಕೊರೆಯುವುದಾಗಿ ಕೆಪಿಸಿ(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ಹೇಳಿದೆ. ಅದಕ್ಕಾಗಿ 18 ಟನ್ ಸ್ಫೋಟಕ ಬಳಸಲಿದೆ. ಇದರಿಂದ ವನ್ಯಪ್ರಾಣಿ ಸಂಕುಲವೇ ಸಂಕಷ್ಟಕ್ಕೆ ಸಿಲುಕಲಿದೆ. ಟನ್‌ಗಟ್ಟಲೆ ಸ್ಫೋಟಕ(Explosive) ಬಳಸಿದರೆ ಜೀವ ಸಂಕುಲ ಸಂಕಷ್ಟಕ್ಕೆ ಸಿಲುಕಲಿದೆ ಎಂದರು.
ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಅಲ್ಲದೆ ಕೆಪಿಸಿ ಯೋಜನೆ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿಲ್ಲ. ಡಿಪಿಆರ್(DPR) ಅನ್ನು ರಹಸ್ಯವಾಗಿ ಇಡಲಾಗಿದೆ. ಯಾವ ವರದಿಗಳೂ ಬಹಿರಂಗಗೊಳ್ಳದೆ ಗೌಪ್ಯವಾಗಿಟ್ಟುಕೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದಲೂ ಅನುಮತಿ ಸಿಕ್ಕಿಲ್ಲ. ರಾಜ್ಯದಲ್ಲಿ ಸರ್ಕಾರ ತಿಳಿಸಿದಂತೆ ವಿದ್ಯುತ್ ಕೊರತೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಅವೈಜ್ಞಾನಿಕ ಯೋಜನೆ ಜಾರಿ ಮಾಡಲು ಹೊರಟಿರುವುದು ದುರಂತ ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್.ವಿಶ್ವೇಶ್ವರಯ್ಯ ಮಾತನಾಡಿ, ಪ್ರಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸುವುದು ನಮ್ಮ ಅನಿವಾರ್ಯವಾಗಿದೆ. ಈ ಅವೈಜ್ಞಾನಿಕ ಯೋಜನೆ ವಿರುದ್ಧ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ 100ರಿಂದ 150 ಬಸ್‌ಗಳಲ್ಲಿ ತೆರಳಿ ಕೆಪಿಸಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದರು.
ರಾಷ್ಟ್ರಭಕ್ತ ಬಳಗದ ಶ್ರೀಕಾಂತ್, ಅಣ್ಣಾ ಹಜಾರೆ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ. ಚಿಕ್ಕಸ್ವಾಮಿ, ಪ್ರಮುಖರಾದ ಆನಂದ ಕಡೂರು, ಎ.ಕೆ.ಚಂದ್ರಪ್ಪ, ಎಸ್.ಜಿ.ಎಂ.ಪ್ರಕಾಶ್, ವಿಜಯ್‌ಕುಮಾರ್, ಟಿ.ಎಂ.ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net