13 ವರ್ಷಗಳಿಂದ ವಿಚಾರಣೆಗೆ ಹಾಜರಾಗದ ವ್ಯಕ್ತಿ ಬಂಧನ । Arrest warrant
ಕಳೆದ 13 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿದ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು
Published on:
Copied
Follow Us
ಶಿವಮೊಗ್ಗ: ಕಳೆದ 13 ವರ್ಷಗಳಿಂದ ನ್ಯಾಯಾಲಯ(Court)ಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
ಹುಬ್ಬಳ್ಳಿ ಮಂಟೂರ್ ರಸ್ತೆಯ ಅರಳಿಕಟ್ಟಿ ಕಾಲನಿ ನಿವಾಸಿ ಗುರುರಾಜ್ ಯಲ್ಲಪ್ಪ ಕುರುಬರ ಅಲಿಯಾಸ್ ಜಾಫರ್ ಖಾನ್(42) ಬಂಧಿತ ಆರೋಪಿ. 2013ರಲ್ಲಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆತ ಜಾಮೀನಿನ ಮೇಲೆ ಹೊರಬಂದಿದ್ದ. ಆದರೆ ಕಳೆದ 13 ವರ್ಷಗಳಿಂದ ಆತ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ ಆತನ ವಿರುದ್ಧ ಶಿಕಾರಿಪುರದ ಪಿಸಿಜೆ(PCJ) ಮತ್ತು ಜೆಎಂಎಫ್‌ಸಿ(JMFC) ನ್ಯಾಯಾಲಯದಲ್ಲಿ ಬಂಧನದ ವಾರೆಂಟ್ (Arrest warrant)ಜಾರಿಯಾಗಿತ್ತು.
ಶಿಕಾರಿಪುರ ಡಿವೈಎಸ್‌ಪಿ(DYSP) ಕೆ.ಕೇಶವ ಮೇಲ್ವಿಚಾರಣೆಯಲ್ಲಿ, ಶಿಕಾರಿಪುರದ ಸಿಪಿಐ ಮಹಾಂತೇಶ್ ಕೆ ಲಂಬಿ ಮತ್ತು ಸೊರಬ ಸಿಪಿಐ(CPI) ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಸೋಮನಾಯ್ಕ, ಶಶಿಧರ್ ಸೋಮವಾರ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.