ಸಾಗರದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಗರ ಶಾಖೆ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿದರು. ರಾಜಭಕ್ಷಿ ರಟ್ಟಿಹಳ್ಳಿ, ಎಚ್.ಸೋಮಪ್ಪ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆ
ಸಾಗರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಗರ ಶಾಖೆ ಅಧ್ಯಕ್ಷರಾಗಿ ಮಾಲತೇಶಪ್ಪ ಅವಿರೋಧ ಆಯ್ಕೆಯಾದರು.
ಜೆ.ರಮೇಶ್, ಬಿ.ಆರ್.ಚಂದ್ರಕಲಾ(ಉಪಾಧ್ಯಕ್ಷ), ಜಿ.ಕೆ.ಶಂಕರ್(ಪ್ರಧಾನ ಕಾರ್ಯದರ್ಶಿ), ರಾಜಾಭಕ್ಷಿ ರಟ್ಟಿಹಳ್ಳಿ(ಕೋಶಾಧ್ಯಕ್ಷ), ಎನ್.ಜೆ.ರಾಚಪ್ಪ, ಮುಕ್ತ ರಾಜಚಂದ್ರ ಹೆಗಡೆ (ಸಹ ಕಾರ್ಯದರ್ಶಿ), ಚಂದ್ರಪ್ಪ ಅಳೂರು, ಸೋನಿಯಾ ರಾಣಿ ನರೋನಾ(ಸಂಘಟನಾ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಸದ್ಗುರು ಶಿಕ್ಷಕ ಬಳಗದ 12 ಜನರು ಆಯ್ಕೆ ಆಗಿದ್ದು, ನಮ್ಮ ತಂಡ ಉತ್ತಮ ಕೆಲಸ ಮಾಡಲಿದೆ. ಗುರುಭವನ ಕಾಮಗಾರಿ ಪೂರ್ಣಗೊಳಿಸುವುದು ಮೊದಲ ಆದ್ಯತೆಯಾಗಿದೆ. ಗುರುಭವನ ಕೆಳಗಿನ ಅಂತಸ್ತು ನಿರ್ಮಾಣವಾಗಿದ್ದು, ಮೇಲ್ಭಾಗ ನಿರ್ಮಿಸಲಾಗುವುದು. ಜನಪ್ರತಿನಿಧಿಗಳ ಬಳಿ ಅನುದಾನಕ್ಕೆ ಮನವಿ ಮಾಡಲಾಗುತ್ತದೆ. 2 ಕೋಟಿ ರೂ. ವೆಚ್ಚದಲ್ಲಿ ಗುರುಭವನ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.
ಶಿಕ್ಷಕರು ಆನ್‌ಲೈನ್ ಕೆಲಸಗಳಿಗೆ ಸೈಬರ್‌ಗಳಿಗೆ ಅಲೆಯುವುದನ್ನು ತಪ್ಪಿಸಲು ಟೀಚರ್ಸ್ ಕಾಲನಿ ಮೂಲಕ ಉಚಿತ ಆನ್‌ಲೈನ್ ಸೇವೆ ಒದಗಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸುವ ಉದ್ದೇಶ ಹೊಂದಿದೆ. ತಾಲೂಕಿನ ನಾಲ್ಕು ಹೋಬಳಿ ಕೇಂದ್ರದಲ್ಲಿ ಟೀಚರ್ಸ್ ಕಾರ್ನರ್ ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಸಂಘದ ರಾಜಭಕ್ಷಿ ರಟ್ಟಿಹಳ್ಳಿ, ಎಚ್.ಸೋಮಪ್ಪ, ಸೋನಿಯಾ ರಾಣಿ ನರೋನಾ, ಮುಕ್ತಾ ರಾಮಚಂದ್ರ ಹೆಗಡೆ ಇತರರಿದ್ದರು.