ಪಾಲಕರ ಕನಸನ್ನು ನನಸು ಮಾಡಿ

ರಿಪ್ಪನ್​ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಟಾಕಪ್ಪ, ಬಿ.ಎಲ್​.ರಾಜು, ಶ್ರೀನಿವಾಸ ಆಚಾರ್​ ಇತರರಿದ್ದರು.
ರಿಪ್ಪನ್​ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಟಾಕಪ್ಪ, ಬಿ.ಎಲ್​.ರಾಜು, ಶ್ರೀನಿವಾಸ ಆಚಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎನ್​ಎಸ್​ಎಸ್​ ಚಟುವಟಿಕೆಗಳ ಸಮಾರೋಪ
  • ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
  • ಪಾಲಕರ ಕನಸನ್ನು ನನಸು ಮಾಡಿ
ರಿಪ್ಪನ್​ಪೇಟೆ ಮಕ್ಕಳ ಬಗ್ಗೆ ಪಾಲಕರು ಅಪಾರ ಭರವಸೆ ಹೊಂದಿರುತ್ತಾರೆ. ಅವರ ನಂಬಿಕೆ ಹುಸಿಗೊಳಿಸಬೇಡಿ. ಒಳ್ಳೆಯ ಶಿಕ್ಷಣ ಪಡೆದು ಸುಸಂಸತ ವ್ಯಕ್ತಿತ್ವ ರೂಪಿಸಿಕೊಳ್ಳಿರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸತಿಕ, ಕ್ರೀಡಾ, ರೋವರ್​&ರೇಂರ್ಜಸ್​, ಎನ್​ಎಸ್​ಎಸ್​ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಶಿಕ್ಷಣ ಸರ್ಕಾರ ಮತ್ತು ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ನೀವು ಪುಣ್ಯಮಾಡಿದ್ದೀರಿ. ಕುಟುಂಬದ ಕಷ್ಟ&ನಷ್ಟಗಳನ್ನು ನಿಮ್ಮ ಗಮನಕ್ಕೆ ತಾರದೆ ಓದುವಂತೆ ಪಾಲಕರು ಪ್ರೆರೇಪಿಸುತ್ತಿದ್ದಾರೆ. ಅಗತ್ಯಕ್ಕಷ್ಟೆ ಮೊಬೈಲ್​ ಬಳಸಿ, ಜೀವನದ ಭವಿಷ್ಯದ ಗುರಿಹೊಂದಿ ವಿದ್ಯೆ ಕಲಿಯಿರಿ. ಪದವಿ ಮುಗಿದ ಯುವಜನರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಯುವನಿಧಿ ಕಲ್ಪಿಸಿದೆ. ಕೆಲಸ ಸಿಗುವವರೆಗೆ ಇದನ್ನು ಬಳಸಿಕೊಂಡು ಮುಂದೊಂದು ದಿನ ಒಳ್ಳೆಯ ಉದ್ಯೋಗಸ್ಥರಾಗಿ ಎಂದು ಹೇಳಿದರು.
ಕಲಾವಿದ ಕಣ್ಣೂರು ಟಾಕಪ್ಪ, ಪ್ರಾಚಾರ್ಯ ಬಿ.ಎಲ್​.ರಾಜು, ಸಿಡಿಸಿ ಉಪಾಧ್ಯ ಶ್ರೀನಿವಾಸ ಆಚಾರ್​, ಸದಸ್ಯರಾದ ಮಂಜುನಾಥ ಕಾಮತ್​, ಫ್ಯಾನ್ಸಿ ರಮೇಶ್​, ಪಿಯೂಸ್​ ರೋಡ್ರಿಗಸ್​, ರು, ಡಾ.ಎಂ.ಕುಮಾರ, ಡಾ. ರಜನಿಕಾಂತ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net