ಇಲಾಖೆ ಸವಲತ್ತು ಸದ್ಬಳಕೆ ಮಾಡಿಕೊಳ್ಳಿ

ತೀರ್ಥಹಳ್ಳಿಯಲ್ಲಿ ಕಾರ್ಮಿಕ ಇಲಾಖೆ ಕಾರ್ಯಕ್ರಮದಲ್ಲಿ ಲಾನುಭವಿ ಕಾರ್ಮಿಕರಿಗೆ ಶಾಸಕ ಆರಗ ಜ್ಞಾನೇಂದ್ರ ಕಿಟ್‌ಗಳನ್ನು ವಿತರಿಸಿದರು. ಶೈಲಾ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಸುಖಿತಾ ಇತರರಿದ್ದರು.
ತೀರ್ಥಹಳ್ಳಿಯಲ್ಲಿ ಕಾರ್ಮಿಕ ಇಲಾಖೆ ಕಾರ್ಯಕ್ರಮದಲ್ಲಿ ಲಾನುಭವಿ ಕಾರ್ಮಿಕರಿಗೆ ಶಾಸಕ ಆರಗ ಜ್ಞಾನೇಂದ್ರ ಕಿಟ್‌ಗಳನ್ನು ವಿತರಿಸಿದರು. ಶೈಲಾ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಸುಖಿತಾ ಇತರರಿದ್ದರು.
Published on
ತೀರ್ಥಹಳ್ಳಿ: ಕಾರ್ಮಿಕ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಅಸಡ್ಡೆ ತೋರದೆ ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕಾರ್ಮಿಕ ಇಲಾಖೆಯಿಂದ ಗ್ರಾಮೀಣ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 139 ಮಂದಿ ಲಾನುಭವಿ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರದಿಂದ ಕಾರ್ಮಿಕ ಕಾರ್ಡ್‌ಗಳಿಗೆ ಸಾಕಷ್ಟು ಸವಲತ್ತುಗಳು ದೊರೆಯುತ್ತವೆ. ಈ ಕಾರ್ಡ್‌ಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ವರ್ಷಕ್ಕೊಮ್ಮೆ ಈ ಕಾರ್ಡ್‌ಗಳನ್ನು ನವೀಕರಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಪಘಾತದಲ್ಲಿ ಕಾರ್ಮಿಕರಿಗೆ ಗಾಯಗಳಾದ ಸಂದರ್ಭ ಕಾರ್ಮಿಕ ಕಾರ್ಡ್ ಆಸ್ಪತ್ರೆ ವೆಚ್ಚ ಸರಿದೂಗಿಸಲು ನೆರವಿಗೆ ಬರುತ್ತದೆ. ಮಕ್ಕಳ ವಿವಾಹ ಕಾರ್ಯಕ್ಕೆ, ಅಪಘಾತದಲ್ಲಿ ಗಾಯಗೊಂಡರೆ, ಮೃತಪಟ್ಟರೆ ಪರಿಹಾರ ದೊರೆಯುತ್ತದೆ ಎಂದರು.
ತಾಪಂ ಇಒ ಎಂ.ಶೈಲಾ, ಪಪಂ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಕಾರ್ಮಿಕ ಇಲಾಖೆ ಅಧಿಕಾರಿ ಸುಖಿತಾ ಇದ್ದರು.
ಸ್ಫೋಟ ಪ್ರಕರಣ ಆತಂಕಕಾರಿ: ಸೋಮವಾರ ನವದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ಪ್ರಕರಣ ಆತಂಕಕಾರಿ. ಇದರಲ್ಲಿ ಪಾಕಿಸ್ತಾನದ ಕೈವಾಡ ಇರುವ ಶಂಕೆ ಇದೆ ಎಂದು ಶಾಸಕ ಆರಗ ಜ್ಞಾನೇಂದ್ರ ದೂರಿದ್ದಾರೆ. ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಒಂದೇ ಧರ್ಮದವರಿಂದ ನಡೆಯುತ್ತಿರುವುದು ಗಮನಾರ್ಹ. ಕಳೆದ 11 ವರ್ಷಗಳಿಂದ ನಿಯಂತ್ರಣದಲ್ಲಿದ್ದ ಭಯೋತ್ಪಾದಕ ಚಟುವಟಿಕೆ ಮತ್ತೊಮ್ಮೆ ತಲೆಯೆತ್ತಿದೆ ಎಂದಿದ್ದಾರೆ. ಜನರ ಪ್ರಾಣವನ್ನು ಹೀರುವ ರಾಕ್ಷಸಿ ಪ್ರವೃತ್ತಿಯ ಈ ಘಟನೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ಈ ಬಗ್ಗೆ ಮೊಂಡು ವಾದವೂ ಸರಿಯಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಇಂತಹ ಪ್ರಕರಣಗಳನ್ನು ದಾಖಲಿಸಿ ಕೈಬಿಡುತ್ತಿದ್ದರು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಿಗಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net