ರಿಪ್ಪನ್ಪೇಟೆ: ಮಹಾಭಿಷೇಕ ಜೈನಧರ್ಮದ ಆಚರಣೆಯಾಗಿದೆ. ಜೀವನದಲ್ಲಿ ಕಷ್ಟಕಾರ್ಪಣ್ಯ ಸಹಜ. ಆದರೆ ಜೀವನ ಪಾವನವಾಗಲು ಧರ್ಮ ಪರಿಪಾಲನೆಯಿಂದ ವ್ನಿಗಳು ನಿವಾರಣೆ ಆಗುತ್ತವೆ ಎಂದು ಡಾ. ದೇವೇಂದ್ರರ್ಕಿತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಹೊಂಬುಜ ಜೈನಮಠದಲ್ಲಿ ಶುಕ್ರವಾರ ತ್ರಿಕೂಟ ಜಿನಾಲಯದ ಪಾರ್ಶ್ವನಾಥ ಸ್ವಾಮಿಗೆ ಮಹಾಭಿಷೇಕ ನೆರವೇರಿಸಿ ಆಶೀರ್ವಚನ ನೀಡಿದರು. ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರ ಜೈನಮಠದ ಲ$್ಮಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾಭಿಷೇಕ, ಧಾರ್ಮಿಕ ವಿಧಾನಗಳನ್ನು ಆಚರಿಸಲಾಯಿತು.