ಹನುಮಂತ ದೇವರ ಉತ್ಸವ | fair

ಹೊಳೆಹೊನ್ನೂರು ಸಮೀಪದ ಮೈದೊಳಲಿನಲ್ಲಿ ನೆರವೇರಿದ ಹನುಮಂತ ದೇವರ ಕಾರ್ಣಿಕ.
ಹೊಳೆಹೊನ್ನೂರು ಸಮೀಪದ ಮೈದೊಳಲಿನಲ್ಲಿ ನೆರವೇರಿದ ಹನುಮಂತ ದೇವರ ಕಾರ್ಣಿಕ.
Published on
ಹೊಳೆಹೊನ್ನೂರು: ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ! ಇದು ಮೈದೊಳಲಿನಲ್ಲಿ ಜರುಗಿದ ಹನುಮಂತ ದೇವರ ಕಾರ್ಣಿಕದ ನುಡಿ.
ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ಪ್ರತಿ ವರ್ಷ ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕೋತ್ಸವ ಜರುಗುತ್ತದೆ. ಸೋಮವಾರ ಸಂಜೆ ಗೋದೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಅವಾಹನೆ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರದ ಕಂಬವೇರಿ ಕಾರ್ಣಿಕ ನುಡಿಯುತ್ತಾನೆ. ಈ ಬಾರಿ ಶಿಖರದ ತುದ್ದಿಗೆ ಘಟ ಸರ್ಪ ಏರಿತಲ್ಲೇ ಎಚ್ಚರ ಎಂದು ಕಾರ್ಣಿಕ ನುಡಿದರು. ಕಾರಣಿಕದ ವಾಕ್ಯಗಳನ್ನು ಆಧರಿಸಿ ಗ್ರಾಮೀಣ ಭಾಗದ ಜನ ಜೀವನ, ಭವಿಷ್ಯವನ್ನು ಹೇಳುತ್ತಾರೆ.
ಕೊನೆಯಲ್ಲಿ ಎಚ್ಚರ ಎಂದಿರುವುದರಿಂದ ಈ ಬಾರಿ ರೈತರಿಗೆ ಸ್ವಲ್ಪ ಹಿನ್ನಡೆಯಾಗುತ್ತದೆ. ನಾಡಿನಲ್ಲಿ ಮಳೆ ಕಡಿಮೆಯಾಗಿ ಕೃಷಿ ಚಟುವಟಿಕೆಗಳಿಗೆ ಅಡಚಣೆಗಳು ಉಂಟಾಗಬಹುದು. ಪ್ರಕೃತಿ ವಿಕೋಪಗಳಿಂದ ಸಂಭವಿಸಬಹುದಾದ ಹಾನಿಯನ್ನು ತಿಳಿಸುತ್ತದೆ ಎಂದು ಹಿರಿಯರು ಕಾರ್ಣಿಕದ ವಾಕ್ಯವನ್ನು ವಿಶ್ಲೇಷಿಸಿದರು. 
ಮಹಿಳೆಯರು, ಮಕ್ಕಳು ಹನುಮಂತ ದೇವರ ಪಲ್ಲಕಿ ಹಾಗೂ ಉತ್ಸವ ಮೂರ್ತಿಗಳಿಗೆ ಆರತಿ ಮಾಡಿ, ಹಣ್ಣು ಕಾಯಿ ನೈವೇದ್ಯ ಮಾಡಿದರು. ಪಿಳ್ಳೆಮಟ್ಟಿ ಹನುಮಂತಪ್ಪ, ಪರುಶುರಾಮ ದೇವರು, ಲಕ್ಷ್ಮೀದೇವಿ, ಶ್ರೀರಾಮ ದೇವರುಗಳ ಉತ್ಸವ ಮೂರ್ತಿಗಳು ಕಾರ್ಣಿಕದಲ್ಲಿ ಭಾಗಿಯಾಗಿದ್ದವು. ಆಂಜನೇಯ ಸೇವಾ ಸಮಿತಿ, ಮೈದೊಳಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net