ಸಾಗರ ನಗರಸಭೆಗೆ ಲೋಕಾಯುಕ್ತ ಭೇಟಿ | Lokayukta police

ಸಾಗರ ನಗರಸಭೆಗೆ ಭೇಟಿ ನೀಡಿದ್ದ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ಕಡತ ಪರಿಶೀಲನೆ ನಡೆಸಿದರು.
ಸಾಗರ ನಗರಸಭೆಗೆ ಭೇಟಿ ನೀಡಿದ್ದ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ಕಡತ ಪರಿಶೀಲನೆ ನಡೆಸಿದರು.
Published on
ಸಾಗರ: ಪಟ್ಟಣದ ಜಂಬಗಾರು ಬಡಾವಣೆಯ ಸರ್ವೇ ನಂ.63ರ 4 ಎಕರೆ ಭೂಮಿ ಅನಧಿಕೃತವಾಗಿ ಖಾತೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಾಗರ ನಗರಸಭೆಗೆ ಸೋಮವಾರ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್ ಮಾತನಾಡಿ, ಸಾಗರ ನಗರಸಭೆ ವ್ಯಾಪ್ತಿಯ ಜಂಬಗಾರು ಬಡಾವಣೆಯ ಸರ್ವೇ ನಂ. 63ರಲ್ಲಿ ಅಶ್ವತ್ಥನಾರಾಯಣ ಎಂಬ ಮೂಲವ್ಯಕ್ತಿಯ ಹೆಸರಿನಲ್ಲಿದ್ದ 4 ಎಕರೆ ಭೂಮಿಯನ್ನು ಶರಾವತಿ ಜನಾಭಿವೃದ್ಧಿ ಸಂಸ್ಥೆ ಹೆಸರಿಗೆ ನೋಂದಣಿಯಾಗಿತ್ತು. ಭೂಮಿ ಖಾಲಿ ಇರುವುದನ್ನು ಗಮನಿಸಿದ ವ್ಯಕ್ತಿಯೋರ್ವ ತನ್ನ ಹೆಸರಿಗೆ ಅಶ್ವತ್ಥನಾರಾಯಣ ಎಂಬುವರು ಜಿಪಿಎ ಮಾಡಿಕೊಟ್ಟಿದ್ದಾರೆಂದು ನಗರಸಭೆಗೆ ನಕಲಿ ದಾಖಲೆ ನೀಡಿ ನಿವೇಶನ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ನಿವೇಶನ ಅಕ್ರಮ ನಡೆದಿರುವ ಮಾಹಿತಿಯನ್ನು ಗಮನಿಸಿ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೀಗ ಅಗತ್ಯ ಮಾಹಿತಿ ಕಲೆ ಹಾಕಲು ಸೋಮವಾರ ನಗರಸಭೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದರು.
ಇನ್ಸ್‌ಪೆಕ್ಟರ್ ರುದ್ರೇಶ್, ವೀರಬಸಪ್ಪ, ಸಿಬ್ಬಂದಿ ಟೀಕಪ್ಪ, ಮಂಜುನಾಥ್, ಸುರೇಂದ್ರ, ಚಂದ್ರಿಬಾಯಿ, ಅಂಜಲಿ, ಚೇತನ್, ಆನಂದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net