ಸಾಹಿತ್ಯ ಜನಜಾಗೃತಿಗೆ ದಾರಿದೀಪ

ಶಿರಾಳಕೊಪ್ಪದ ಕದಂಬ ಪ್ರಥಮದರ್ಜೆ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಚಾರ್ಯ ಬಿ.ಎಚ್​.ಯುವರಾಜ್​ ಉದ್ಘಾಟಿಸಿದರು. ಡಾ. ರಾಜೇಂದ್ರ, ಎಚ್​.ಎಸ್​.ಯೋಗಿರಾಜ್​, ಲತಾ, ಟಿ.ಎಂ.ಮಂಜಣ್ಣ ಇತರರಿದ್ದರು.
ಶಿರಾಳಕೊಪ್ಪದ ಕದಂಬ ಪ್ರಥಮದರ್ಜೆ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಚಾರ್ಯ ಬಿ.ಎಚ್​.ಯುವರಾಜ್​ ಉದ್ಘಾಟಿಸಿದರು. ಡಾ. ರಾಜೇಂದ್ರ, ಎಚ್​.ಎಸ್​.ಯೋಗಿರಾಜ್​, ಲತಾ, ಟಿ.ಎಂ.ಮಂಜಣ್ಣ ಇತರರಿದ್ದರು.
Published on
ಶಿರಾಳಕೊಪ್ಪ: ಹನ್ನೆರಡನೇ ಶತಮಾನದಲ್ಲಿ ಶಿವಶರಣರ ವಚನಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವು ಇಂದಿಗೂ ಸಮಾಜದ ಅಭಿವೃದ್ಧಿ ಹಾಗೂ ಜನಜಾಗೃತಿಗೆ ದಾರಿದೀಪವಾಗಿವೆ ಎಂದು ಉಪನ್ಯಾಸಕಿ ಲತಾ ಯೋಗಿರಾಜ್​ ಹೇಳಿದರು.
ಪಟ್ಟಣದ ಕದಂಬ ಪ್ರಥಮದರ್ಜೆ ಕಾಲೇಜಿನಲ್ಲಿ ರತ್ನಮ್ಮ ಇಸ್ಲೂರು ಮತ್ತು ಹಾಲಪ್ಪ ಇಸ್ಲೂರು ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಶರಣ& ಶರಣೆಯರ ವಚನಗಳು ಸಾಮಾಜಿಕ, ಸಾಂಸತಿಕ ಹಾಗೂ ಸಾಹಿತ್ಯದ ಪ್ರತಿಕಗಳಾಗಿವೆ. ಇಂದಿನ ಯುವಪೀಳಿಗೆಗೆ ಕನ್ನಡ ಸಾಹಿತ್ಯವು ಸಂಸತಿ, ಸಂಸ್ಕಾರಗಳಿಗೆ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಲಯನ್ಸ್​ ಕ್ಲಬ್​ ಸದಸ್ಯೆ ಪ್ರತಿಭಾ ಉಮೇಶ್​ ಇಸ್ಲೂರು ಮಾತನಾಡಿ, ಕನ್ನಡ ಕವಿಗಳ ಸಾಹಿತ್ಯ, ಚಿಂತನೆಗಳು ಇಂದಿನ ಪ್ರಜೆಗಳಿಗೆ ಸ್ಫೂರ್ತಿದಾಯಕ ಎಂದರು.
ಪ್ರಾಚಾರ್ಯ ಬಿ.ಎಚ್​.ಯುವರಾಜ್​, ಉಪನ್ಯಾಸಕ ಡಾ. ರಾಜೇಂದ್ರ, ಲಯನ್ಸ್​ ಕ್ಲಬ್​ ಅಧ್ಯ ಎಚ್​.ಎಸ್​.ಯೋಗಿರಾಜ್​, ಕಸಾಪ ಹೋಬಳಿ ಟಕದ ಅಧ್ಯ ಟಿ.ಎಂ.ಮಂಜಣ್ಣ, ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕಿನ ನಿರ್ದೇಶಕ ಉಮೇಶ್​ ಇಸ್ಲೂರು, ರೇಣುಕಯ್ಯ ಸ್ವಾಮಿ, ಡಾ. ಮಲ್ಲನ ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net