ಜಲಾಶಯ ಗರಿಷ್ಠ ಮಟ್ಟ ತಲುಪುವಷ್ಟು ದೊಡ್ಡ ಮಳೆಯ ಮುನ್ಸೂಚನೆ ಇಲ್ಲ. ಅಂದಿನ ದಿನಗಳಲ್ಲಿ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಬೆಡ್ ಲೆವೆಲ್ ತಲುಪಿದರೆ ಒಂದು ವರ್ಷ ನಿರ್ವಹಣೆ ಮಾಡಬಹುದಿತ್ತು. ಆದರೆ ಪ್ರಸ್ತುತ ಈಗಿರುವ ನೀರು ಸಾಕಾಗುವುದಿಲ್ಲ. ಅಂದು ರಾಜ್ಯಕ್ಕೆ ಶೇ.75ರಷ್ಟು ವಿದ್ಯುತ್ ಪೂರೈಸಬಹುದಿತ್ತು, ಆದರೆ ಇಂದು ಬೇಡಿಕೆ ಹೆಚ್ಚಾಗಿದ್ದು ರಾಜ್ಯಕ್ಕೆ ಶೇ.15ರಿಂದ 20 ಮಾತ್ರ ವಿದ್ಯುತ್ ಪೂರೈಸಬಹುದು ಎಂದು ಕೆಪಿಸಿ ಕಾರ್ಯನಿರ್ವಾಹಕ ಅಭಿಯಂತ ಆರ್.ಶಿವಕುಮಾರ್ ಮಾಹಿತಿ ನೀಡಿದರು.