ಲಿಂಗನಮಕ್ಕಿ ವಿದ್ಯುತ್ ಉತ್ಪಾದನೆ ಸ್ಥಗಿತ

linganamakki
linganamakki
Published on

ಪ್ರಮುಖ ಮುಖ್ಯಾಂಶಗಳು

  • ವಾರ್ಷಿಕ ನಿರ್ವಹಣೆಗೆ ಮುಂದಾದ ಕೆಪಿಸಿ
ಕಾರ್ಗಲ್: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ ಕೆಪಿಸಿ ವಾರ್ಷಿಕ ನಿರ್ವಹಣೆಗೆ ಮುಂದಾಗಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ ಮಟ್ಟ 1,745.75 ಅಡಿ ಇದ್ದು, ಸಾಮಾನ್ಯವಾಗಿ 1,743 ಅಡಿವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಆದರೆ ಕನಿಷ್ಠ ಮಟ್ಟದ ಸಂದರ್ಭಗಳಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ವಿದ್ಯುತ್ ಉತ್ಪಾದನೆಗೆ ಜಲಾಶಯದಿಂದ ನೀರು ಪೂರೈಸುವ ಪೆನ್‌ಸ್ಟಾಕ್ ಪೈಪ್‌ಲೈನ್ ಹಾಗೂ ಯೂನಿಟ್ ನಿರ್ವಹಣೆ ಜವಾಬ್ದಾರಿಯನ್ನು ಕೆಪಿಸಿ ಅಧಿಕಾರಿಗಳು ಹಾಗೂ ಉದ್ಯೋಗಿಗಳು ನಿರ್ವಹಿಸುತ್ತಿದ್ದಾರೆ.
ಲಿಂಗನಮಕ್ಕಿಯ ಎರಡು ಯೂನಿಟ್‌ಗಳ ಪೈಕಿ ಎರಡನೇ ಯೂನಿಟ್ ಈಗಾಗಲೇ ದುರಸ್ತಿಯಲ್ಲಿದೆ. ಇದೀಗ ಒಂದನೇ ಯೂನಿಟ್ ಅನ್ನು ನಿರ್ವಹಣೆಗಾಗಿ ನಿಲ್ಲಿಸಲಾಗಿದೆ. ಒಟ್ಟಾರೆ ಎರಡೂ ಯೂನಿಟ್‌ಗಳ ಕಾರ್ಯ ಸ್ಥಗಿತವಾದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net