ಮೌಲ್ಯಯುತ ಸಂಸ್ಕಾರದಿಂದ ಬದುಕು ಸುಂದರ

ಸಾಗರದ ಪ್ರಜ್ಞಾಭಾರತಿ ವಿದ್ಯಾಮಂದಿರದಲ್ಲಿ ಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅಶ್ವಿನಿಕುಮಾರ್, ಸದಾನಂದ ಶರ್ಮ, ಭಾರತಿ ಶರ್ಮ, ಡಾ. ಟಿ.ಪ್ರಸನ್ನ ಮತ್ತಿತರರಿದ್ದರು.
ಸಾಗರದ ಪ್ರಜ್ಞಾಭಾರತಿ ವಿದ್ಯಾಮಂದಿರದಲ್ಲಿ ಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅಶ್ವಿನಿಕುಮಾರ್, ಸದಾನಂದ ಶರ್ಮ, ಭಾರತಿ ಶರ್ಮ, ಡಾ. ಟಿ.ಪ್ರಸನ್ನ ಮತ್ತಿತರರಿದ್ದರು.
Published on
ಸಾಗರ: ಮಕ್ಕಳಿಗೆ ಭಾರತೀಯ ಸಂಸ್ಕಾರ, ಸಂಸ್ಕೃತಿಯ ತಳಹದಿಯಲ್ಲಿ ಶಿಕ್ಷಣ ನೀಡುವುದರಿಂದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಸಾಗರದ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಎಸ್.ಎನ್.ನಗರದ ಪ್ರಜ್ಞಾಭಾರತಿ ವಿದ್ಯಾಮಂದಿರದಲ್ಲಿ ಲಯನ್ಸ್ ಕ್ಲಬ್ ಸಾಗರ, ಗಜಾನನ ಸಂಸ್ಕೃತ ಪಾಠಶಾಲೆ, ರೋಟರಿ ರೆಡ್‌ಕ್ರಾಸ್ ರಕ್ತಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ಶಾಲೆಗೆ ಕಂಪ್ಯೂಟರ್ ಕೊಡುಗೆ ಹಾಗೂ ಅನ್ನದಾಸೋಹ ಸೇವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಉನ್ನತ ಸಾಧನೆ ಮಾಡುವಂತೆ ಪ್ರೇರಣೆ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಟಿ.ಪ್ರಸನ್ನ ಮಾತನಾಡಿ, ಶತಮಾನ ಕಂಡಿರುವ ಲಯನ್ಸ್ ಸಂಸ್ಥೆ ಜಾಗತಿಕವಾಗಿ ಸೇವೆಯನ್ನೇ ಪ್ರಧಾನ ಉದ್ದೇಶವಾಗಿಸಿ ಕೆಲಸ ಮಾಡುತ್ತಿದೆ. ಸಾಗರದಲ್ಲಿ 53 ವರ್ಷದಿಂದ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಈ ಶಾಲೆಗೆ ಕಂಪ್ಯೂಟರ್ ನೀಡಲಾಗುತ್ತಿದೆ ಎಂದರು.
ಸಾಗರ ಲಯನ್ಸ್ ಎಂಜೆಎಫ್ ಡೊನರ್ ಕ್ಲಬ್‌ನಿಂದ ಪಿಎಂಜೆಎಫ್ ಜಿ.ಶ್ರೀನಿವಾಸ್ ಅವರು ಕೊಡುಗೆ ನೀಡಿದ ಕಂಪ್ಯೂಟರ್ ಅನ್ನು ಪ್ರಜ್ಞಾಭಾರತಿ ವಿದ್ಯಾಮಂದಿರದ ಸಂಸ್ಥಾಪಕ ಸದಾನಂದ ಶರ್ಮ ಮತ್ತು ಭಾರತಿ ಶರ್ಮ ಅವರಿಗೆ ಹಸ್ತಾಂತರಿಸಲಾಯಿತು. ರಕ್ತದಾನ ಶಿಬಿರದಲ್ಲಿ ಪಾಲಕರು ರಕ್ತದಾನ ಮಾಡಿದರು. ಅನ್ನದಾಸೋಹ ಸೇವೆ ಭಾಗವಾಗಿ ಮಕ್ಕಳಿಗೆ ಮಧ್ಯಾಹ್ನದ ಭೋಜನ ನೀಡಲಾಯಿತು.
ಲಯನ್ಸ್ ಸಂಸ್ಥೆಯ ಇ.ಡಿ.ಶ್ರೀಧರ ಈಳಿ, ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷೆ ಪ್ರಭಾವತಿ ಶ್ರೀಧರ್, ಗಜಾನನ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ವಿದ್ವಾನ್ ಗಜಾನನ ಭಟ್ ರೇವಣಕಟ್ಟಾ, ವೆಂಕಟಗಿರಿ, ರವೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net