ದೇವಾಲಯ ಅಭಿವೃದ್ಧಿಗೆ ಕೇಂದ್ರಕ್ಕೆ ಪತ್ರ

ಇಕ್ಕೇರಿ ಆಘೋರೇಶ್ವರ ದೇವಸ್ಥಾನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿದ್ದರು. ಗಣೇಶ್ ಭಟ್, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಜೆ.ಎಚ್.ರಶ್ಮಿ ಇತರರಿದ್ದರು.
ಇಕ್ಕೇರಿ ಆಘೋರೇಶ್ವರ ದೇವಸ್ಥಾನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿದ್ದರು. ಗಣೇಶ್ ಭಟ್, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಜೆ.ಎಚ್.ರಶ್ಮಿ ಇತರರಿದ್ದರು.
Published on
ಸಾಗರ: ಪುರಾತತ್ವ ಇಲಾಖೆ ವ್ಯಾಪ್ತಿಯ ದೇವಸ್ಥಾನ ಪಾಳು ಬೀಳುತ್ತಿದೆ. ಕೇಂದ್ರ ಸರ್ಕಾರವು ದೇವಸ್ಥಾನಗಳನ್ನು ರಾಜ್ಯ ಸರ್ಕಾರದ ಮುಜರಾಯಿ ವ್ಯಾಪ್ತಿಗೆ ನೀಡಿದರೆ ಅಭಿವೃದ್ಧಿ ಮಾಡಲು ಅನುಕೂಲವಾಗುತ್ತದೆ ಎಂದು ಶಾಸಕ  ಗೋಪಾಲಕೃಷ್ಣ ಬೇಳೂರು ಹೇಳಿದರು.
ತಾಲ್ಲೂಕಿನ ಇಕ್ಕೇರಿ ಅಘೋರೇಶ್ವರ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪುರಾತನ ದೇವಸ್ಥಾನಗಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ ಎಂದರು.
ಇಕ್ಕೇರಿ, ಕೆಳದಿ, ನಾಡಕಲಸಿ ಸೇರಿ ಬೇರೆಬೇರೆ ಪುರಾತನ ದೇವಸ್ಥಾನಗಳು ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿವೆ. ಇಲಾಖೆಯು ಅವುಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಕೊಡುತ್ತಿಲ್ಲ. ಇದರಿಂದ ದೇವಸ್ಥಾನ ಮಳೆಗಾಲದಲ್ಲಿ ಸೋರುವ ಜತೆಗೆ ಶಿಥಿಲಾವಸ್ಥೆ ತಲುಪುತ್ತಿದೆ. ಅಭಿವೃದ್ಧಿ ಮಾಡಲು ಹಣ ನೀಡಲು ದಾನಿಗಳು ಮುಂದೆ ಬಂದರೂ ಅದಕ್ಕೂ ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪತ್ರ ಬರೆಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಸಾಗರಕ್ಕೆ ಬರುವ ಪ್ರವಾಸಿಗರಿಗೆ ಜೋಗ ಜಲಪಾತ, ಸಿಗಂದೂರೇಶ್ವರಿ ದೇವಸ್ಥಾನ, ವರದಹಳ್ಳಿ, ಇಕ್ಕೇರಿ, ಕೆಳದಿ ಸೇರಿ ಅನೇಕ ಪ್ರೇಕ್ಷಣೀಯ ಸ್ಥಳಗಳು ಇದೆ. ಇದೊಂದು ಪ್ರವಾಸೋದ್ಯಮ ಹಬ್ ಮಾಡಲು ಎಲ್ಲ ಸಾಧ್ಯತೆಗಳಿವೆ ಎಂದರು
ಗಣೇಶ್ ಭಟ್, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಹೊಳೆಯಪ್ಪ, ನಾಗರಾಜ್, ಮಂಜಪ್ಪ, ಕಬೀರ್ ಚಿಪ್ಳಿ, ಜೆ.ಎಚ್.ರಶ್ಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net