ಸಾಗರ ಸಂಘದದಲ್ಲಿ ಗುರುಸಾರ್ವಭೌಮರ ಆರಾಧನ ಮಹೋತ್ಸವದಲ್ಲಿ ಕಲ್ಯಾಣಿ ಸತ್ಯಶಿಲಾ ರಾಜಗೋಪಾಲ್ ಸ್ಮರಣಾರ್ಥ ಅನುಗ್ರಹ ಪುರಸ್ಕಾರವನ್ನು ಅರ್ಚಕ ರಾಮಚಂದ್ರ ಭಟ್ ದಂಪತಿಗೆ ಪ್ರಧಾನ ಮಾಡಲಾಯಿತು. ವೆಂಕಟೇಶ್ ಕಟ್ಟಿ, ಶ್ರೀಶಾಚಾರ್, ಬದರಿನಾಥ್, ಸಹನಾವಕಲ್ಯಾಣಿ ಇತರರಿದ್ದರು.
Published on:
Copied
Follow Us
ಸಾಗರ: ನಾವು ಮಾಡುವ ಸೇವೆ ಪ್ರಾಮಾಣಿಕವಾಗಿರಬೇಕು. ಭಗವಂತ ಮೆಚ್ಚುವಂತಿರಬೇಕು. ಅದಕ್ಕೆ ಕಿಂಚಿತ್ತೂ ಸ್ವಾರ್ಥದ ಲೇಪನ ಇರಬಾರದು ಎಂದು ಅರ್ಚಕ ರಾಮಚಂದ್ರ ಭಟ್ ಹೇಳಿದರು.
ಸಾಗರ ಮಾಧ್ವ ಸಂಘದಲ್ಲಿ ನಡೆಯುತ್ತಿರುವ ಶ್ರೀ ರಾವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾನುವಾರ ಕಲ್ಯಾಣಿ ಸತ್ಯಶಿಲಾ ರಾಜಗೋಪಾಲ್ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡುವ ರಾಯರ ಅನುಗ್ರಹ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ಭಗವಂತನ ಸಾಾತ್ಕಾರಕ್ಕೆ ನಿರ್ಮಲವಾದ ಭಕ್ತಿಯೇ ಮಾಗೋರ್ಪಾಯ. ಗುರು ರಾಯರ ಅನುಗ್ರಹ ಆಗಬೇಕೆಂದರೆ, ಒಳ್ಳೆಯ ಮನಸ್ಸಿನಿಂದ ಅವರನ್ನು ಸ್ತುತಿಸಬೇಕು. ನಾವು ದೇವರ ಬಳಿ ಏನೆಲ್ಲಾ ಬೇಡಿಕೆಗಳನ್ನಿಡುತ್ತೇವೆ, ಆದರೆ ದೇವರಿಗೆ ಯಾವಕಾಲಕ್ಕೆ, ಯಾರಿಗೆ ಏನು ಅನುಗ್ರಹ ನೀಡಬೇಕೆಂಬ ಚಿಂತನೆ ಇರುತ್ತದೆ. ನಮ್ಮ ಸಂಸತಿ, ಸಂಸ್ಕಾರದ ಉಳಿವಿಗೆ ಸಾಮೂಹಿಕವಾಗಿ ತೊಡಗಿಕೊಳ್ಳುವ ಮನಸ್ಥಿತಿ ಹೆಚ್ಚಾಗಬೇಕು ಎಂದರು.
ಆಡಂಬರದ ಪೂಜೆಯಿಂದ ದೇವರು ಒಲಿಯಲು ಸಾಧ್ಯವಿಲ್ಲ. ಭಕ್ತಿ ಬಹಳ ಮುಖ್ಯ. ಪ್ರತಿ ವರ್ಷ ರಾಯರ ಅನುಗ್ರಹ ಪುರಸ್ಕಾರವನ್ನು ಮಾಧ್ವ ಸಂದಿಂದ ನೀಡಲಾಗುತ್ತಿದೆ. ಇದನ್ನು ರಾಯರ ಆರಾಧನ ಮಹೋತ್ಸವದಲ್ಲಿ ಪ್ರದಾನ ಮಾಡಲಾಗುವುದು. ಅರ್ಚಕರು, ಪಂಡಿತರು ಹಾಗೂ ಪಾಕಶಾಸ್ತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.