ವಿದ್ಯಾರ್ಥಿಗಳಿಗೆ ಇರಲಿ ಸ್ಪಷ್ಟ ಗುರಿ | college programme

ಆಯನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ. ಕುಬೇರಪ್ಪ, ಪ್ರೊ. ಬಿ.ಪಿ.ಮಹಾದೇವ, ಡಾ. ನಿಜಾಮುದ್ದೀನ್, ಶಿಲ್ಪಾ ಪಾಟೀಲ್ ಇತರರಿದ್ದರು.
ಆಯನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ. ಕುಬೇರಪ್ಪ, ಪ್ರೊ. ಬಿ.ಪಿ.ಮಹಾದೇವ, ಡಾ. ನಿಜಾಮುದ್ದೀನ್, ಶಿಲ್ಪಾ ಪಾಟೀಲ್ ಇತರರಿದ್ದರು.
Published on
ಆಯನೂರು: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಹಸಿವು, ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣವಿರಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಕುಬೇರಪ್ಪ ಹೇಳಿದರು.
ಆಯನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ರೋವರ್ಸ್‌, ರೇಂಜರ್ಸ್‌, ಹಾಗೂ ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಆಯನೂರಿನಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭವಾದಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಕಾಲೇಜು  ನಡೆಸಲು ಸೂಕ್ತ ಕಟ್ಟಡ, ಕುಳಿತುಕೊಳ್ಳಲು ಡೆಸ್ಕ್‌ಗಳೇ ಕೊರತೆಯಿತ್ತು. ಪಿಯು ಕಾಲೇಜಿನ ಕಟ್ಟಡಗಳಲ್ಲಿ 4 ಕೊಠಡಿ ಹಾಗೂ ವಿಜ್ಞಾನ ಕೇಂದ್ರದ 2 ಕೊಠಡಿಗಳನ್ನು ಪಡೆದು ತರಗತಿಗಳನ್ನು ನಡೆಸಲಾಯಿತು. ನನ್ನ ಅವಧಿಯಲ್ಲೇ ಕಾಲೇಜಿಗೆ ಸುಮಾರು 30 ಎಕರೆ ಜಾಗ ಮಂಜೂರಾಗಿದೆ. 2.50 ಕೋಟಿ ರೂ.ಗೂ ಅಧಿಕ ಮೊತ್ತದ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ವ್ಯಾಸಂಗ ಮಾಡಬೇಕು ಎಂದು ಸಲಹೆ ನೀಡಿದರು. 
ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ. ಬಿ.ಪಿ.ಮಹಾದೇವ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಕುಂಸಿ, ಹಾರನಹಳ್ಳಿ ಹಾಗೂ ಆಯನೂರು ಸೇರಿ ಪ್ರತಿ ಮನೆಗಳಿಗೂ ತೆರಳಿ ವಿದ್ಯಾರ್ಥಿಗಳನ್ನು ಇಲ್ಲಿಯೇ ದಾಖಲಿಸುವಂತೆ ಮನವಿ ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಪ್ರತಿವರ್ಷ ರ‌್ಯಾಂಕ್ ಪಡೆಯುತ್ತಿದ್ದು ಉತ್ತಮ ಸಾಧನೆ ಮಾಡಿದೆ. ಈ ಬಾರಿಯೂ ಕನಿಷ್ಠ 4 ರ‌್ಯಾಂಕ್‌ಗಳು ಬರುವ ನಿರೀಕ್ಷೆ ಇದೆ ಎಂದರು.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕುಂಸಿ, ಹಾರನಹಳ್ಳಿ ಹಾಗೂ ಆಯನೂರಿನ ವಿದ್ಯಾರ್ಥಿಗಳು, ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು. ಸಿಬಿಸಿ ಸದಸ್ಯರಾದ ಲೋಕೇಶಪ್ಪ, ಬಿ.ಕೆ.ಚುಂಚಪ್ಪ, ಶಿವರಾಜ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ. ನಿಜಾಮುದ್ದೀನ್, ಐಕ್ಯೂಎಸಿ, ಕ್ರೀಡಾ ವಿಭಾಗ ಸಂಚಾಲಕ ಡಾ. ರೋಹನ್ ಡಿಕಾಸ್ಟ, ಪ್ರೊ. ಕೀರ್ತಿನಾಥ, ಶಿಲ್ಪಾ ಪಾಟೀಲ್, ಡಾ. ಹಿರಿಯಪ್ಪ, ರಜತ್ ದೀಕ್ಷಿತ್, ಡಾ. ಗಿರೀಶ್ ರಾಥೋಡ್, ಪಿಯು ಕಾಲೇಜಿನ ಪ್ರಾಚಾರ್ಯ ಕುಮಾರಪ್ಪ, ಕುಂಸಿ ಕಾಲೇಜಿನ ಪ್ರಾಚಾರ್ಯೆ ಅನಿತಾ ಜವಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net