ಅರ್ಹರಿಗೆ ಯೋಜನೆ ಸೌಲಭ್ಯ ತಲುಪಲಿ

ತೀರ್ಥಹಳ್ಳಿ ತಾಲೂಕಿನ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಶಾಸಕ ಆರಗ ಜ್ಞಾನೇಂದ್ರ ವಿತರಿಸಿದರು. ಎಂ.ಶೈಲಾ, ರಾಘವೇಂದ್ರ, ಜ್ಯೋತಿ ಮೋಹನ್ ಇತರರಿದ್ದರು.
ತೀರ್ಥಹಳ್ಳಿ ತಾಲೂಕಿನ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಶಾಸಕ ಆರಗ ಜ್ಞಾನೇಂದ್ರ ವಿತರಿಸಿದರು. ಎಂ.ಶೈಲಾ, ರಾಘವೇಂದ್ರ, ಜ್ಯೋತಿ ಮೋಹನ್ ಇತರರಿದ್ದರು.
Published on
ತೀರ್ಥಹಳ್ಳಿ: ಅಂಗವಿಕಲರಲ್ಲಿ ಆತ್ಮವಿಶ್ವಾಸ ಮೂಡಿಸುವ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅರ್ಹರಿಗೆ ಲಭಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಪಂ, ಜಿಪಂ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ತಾಲೂಕಿನ 12 ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿ, ಈ ವಾಹನಗಳನ್ನು ಬೇರೆಯವರು ಬಳಸಬಾರದು. ಫಲಾನುಭವಿಗಳ ಅನುಕೂಲಕ್ಕಾಗಿ ವಾಹನಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಎರಡು ವರ್ಷಗಳ ಹಿಂದೆ ತಾಲೂಕಿನ ಅಂಗವಿಕಲರಿಗೆ ವಿತರಿಸಿರುವ ತ್ರಿಚಕ್ರ ವಾಹನಗಳ ದಾಖಲೆಯನ್ನು ಈವರೆಗೂ ಲಾನುಭವಿಗಳಿಗೆ ನೀಡದಿರುವ ಬಗ್ಗೆ ಸಿಟ್ಟಾದ ಶಾಸಕರು, ಸಂಬಂಧಿಸಿದ ಇಲಾಖೆ ಜಿಲ್ಲಾ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ದಾಖಲೆಗಳನ್ನು ವಿತರಿಸುವಂತೆ ಸೂಚಿಸಿದರು.
ತಾಪಂ ಇಒ ಎಂ.ಶೈಲಾ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ, ಪಪಂ ಸದಸ್ಯೆ ಜ್ಯೋತಿ ಮೋಹನ್, ರವೀಶ್ ಭಟ್, ಪ್ರಶಾಂತ್ ಕುಕ್ಕೆ, ಶಿವಕುಮಾರ್ ಶೇಡ್ಗಾರ್, ದಿವಾಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net