ಮಾರಿ ಜಾತ್ರೆ ಸಮಿತಿ ಮರು ರಚನೆಯಾಗಲಿ | Protest

ಸಾಗರದ ಮಾರಿಕಾಂಬಾ ಜಾತ್ರೋತ್ಸವ ಸಮಿತಿಯನ್ನು ಮರು ರಚನೆ ಮಾಡಬೇಕು ಎಂದು ಆಗ್ರಹಿಸಿ ನಾಗರೀಕ ವೇದಿಕೆ ಪದಾಧಿಕಾರಿಗಳು ಎಸಿ ವೀರೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಎಂ.ರಾಜಶೇಖರ್, ಮೋಹನ್, ನಾಗರಾಜ ಶೇಠ್, ವಿನಾಯಕ ಇತರರಿದ್ದರು.
ಸಾಗರದ ಮಾರಿಕಾಂಬಾ ಜಾತ್ರೋತ್ಸವ ಸಮಿತಿಯನ್ನು ಮರು ರಚನೆ ಮಾಡಬೇಕು ಎಂದು ಆಗ್ರಹಿಸಿ ನಾಗರೀಕ ವೇದಿಕೆ ಪದಾಧಿಕಾರಿಗಳು ಎಸಿ ವೀರೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಎಂ.ರಾಜಶೇಖರ್, ಮೋಹನ್, ನಾಗರಾಜ ಶೇಠ್, ವಿನಾಯಕ ಇತರರಿದ್ದರು.
Published on
ಸಾಗರ: ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನ ರಚಿಸಿರುವ ಸಮಿತಿಯಲ್ಲಿ ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಾಗರಿಕ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಸಾಗರದ ಮಾರಿಕಾಂಬೆ ಜಾತ್ರೆ ಫೆ.3ರಿಂದ 11ರವರೆಗೆ ನಡೆಯಲಿದೆ. ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಸಂಬಂಧಿಸಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಪೆಂಡಿಂಗ್ ಇರುತ್ತದೆ. ಶಾಸಕರು, ಮಾರಿಕಾಂಬಾ ನ್ಯಾಸ ಸಮಿತಿಯವರು ತಮ್ಮ ಬೆಂಬಲಿಗರು ಮತ್ತು ತಮಗೆ ಬೇಕಾದವರನ್ನು ಮಾತ್ರ ಸಮಿತಿಯಲ್ಲಿ ಸೇರಿಸಿದ್ದಾರೆ. ಕೆಲವು ಸೇವಾಕಾಂಕ್ಷಿಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಜಾತ್ರಾ ಸಮಿತಿಗೆ ಏಕಪಕ್ಷೀಯವಾಗಿ ಸದಸ್ಯರನ್ನು ಸೇರಿಸಿಕೊಂಡಿರುವ ಕ್ರಮ ಸರಿಯಲ್ಲ. ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಅಧಿಕಾರಿಗಳು ಮುಂದೆ ನಿಂತು ಜಾತ್ರಾ ಸಮಿತಿ ರಚಿಸಬೇಕು. ನ್ಯಾಯಾಲಯ ಪ್ರಕರಣದಲ್ಲಿ ಹಾಜರಾದ ಎಲ್ಲ ಪಕ್ಷಗಾರರಿಗೂ ಸಮಿತಿಯಲ್ಲಿ ಸೇರಿಸಿಕೊಂಡು ಹೊಸ ಸಮಿತಿ ರಚಿಸಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.
ವೇದಿಕೆ ಅಧ್ಯಕ್ಷ ಎಂ.ರಾಜಶೇಖರ್, ವಿನಾಯಕ, ಮೋಹನ್, ನಾಗರಾಜ ಶೇಠ್, ಮಂಜಪ್ಪ, ಸುರೇಶ್, ಗೋಪಾಲ, ಸತೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net