ಮುಂದಿನ 25 ವರ್ಷಗಳ ಪ್ರಾಧಿಕಾರದ ವ್ಯಾಪ್ತಿಯ ನಗರದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಜನಸಂಖ್ಯೆ ಆಧರಿಸಿ, ರಸ್ತೆ, ಅಂಗನವಾಡಿ, ಆಸ್ಪತ್ರೆ, ಶಿಕ್ಷಣ, ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಅಮೃತ್ ಸಿಟಿ ಯೋಜನೆಯಡಿ ಮಹಾಯೋಜನೆ ಪರಿಷ್ಕೃತ-2ಕ್ಕೆ ತಾತ್ಕಾಲಿಕ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.